ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹಬ್ಬಗಳ ಆಚರಣೆಗಳಿಂದ ಧಾರ್ಮಿಕ ಸಂಸ್ಕಾರದ ಉಳಿವು: ಶಾಸಕ ಭರತ್ ಶೆಟ್ಟಿ

ಹಬ್ಬಗಳ ಆಚರಣೆಗಳಿಂದ ಧಾರ್ಮಿಕ ಸಂಸ್ಕಾರದ ಉಳಿವು: ಶಾಸಕ ಭರತ್ ಶೆಟ್ಟಿ


ಕೊಂಚಾಡಿ: ಹಿಂದೂ ಧರ್ಮದಲ್ಲಿ ಹಬ್ಬಗಳಿಗೆ ವಿಶೇಷ ಮಹತ್ವವಿದೆ. ಹಬ್ಬಗಳ ಆಚರಣೆಗಳಿಂದ ಧಾರ್ಮಿಕತೆ ಮತ್ತು ಸಂಸ್ಕಾರ ಹೆಚ್ಚು ಗಟ್ಟಿತನವನ್ನು ಪಡೆದುಕೊಳ್ಳುತ್ತದೆ' ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕರಾದ ವೈ. ಭರತ್ ಶೆಟ್ಟಿ ಹೇಳಿದರು.


ಅವರು ಕೊಂಚಾಡಿ ಶ್ರೀ ದುರ್ಗಾ ಪರಮೇಶ್ವರಿ ನಾಗಕನ್ನಿಕಾ ದೇವಸ್ಥಾನದ ಆವರಣದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಇದರ ಕೊಂಚಾಡಿ ದೇರೆಬೈಲ್ ಶ್ರೀ ರಘುವೀರ್ ಘಟಕದ ನೇತೃತ್ವದಲ್ಲಿ ಸೋಮವಾರ ನರಕ ಚತುರ್ದಶಿಯಂದು ಜರುಗಿದ ತುಡರಪರ್ಬ 2022, ಗೋ ಪೂಜೆ ಹಾಗೂ ಗೂಡುದೀಪ ಸ್ಪರ್ಧೆ ಇದರ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.


ಎಲ್ಲರ ಮನೆಯಲ್ಲಿ ಗೋವುಗಳು ಇರುವುದಿಲ್ಲ ಮತ್ತು ಅವರಿಗೆ ಈ  ಕೈಂಕರ್ಯದ ಅವಕಾಶವೂ ಸಿಗುವುದಿಲ್ಲ. ಹಾಗಾಗಿ ಸಾರ್ವಜನಿಕರಿಗೆ ಗೋ ಪೂಜೆಗೆ ಅವಕಾಶ ಮಾಡಿಕೊಟ್ಟಿರುವ ಸಂಘಟಕರು ಅಭಿನಂದನಾರ್ಹರು ಎಂದರು.


ಈ ಸಂದರ್ಭದಲ್ಲಿ ಸಾರ್ವಜನಿಕ ಗೊಪೂಜೆ ಹಾಗೂ ಗೂಡುದೀಪ ಸ್ಪರ್ಧೆಗಳನ್ನು ಆಯೋಜಸಲಾಗಿತ್ತು. ಸಾಂಪ್ರದಾಯಿಕ ಹಾಗೂ ಆಧುನಿಕ ವಿಭಾಗಗಳಲ್ಲಿ ಗಮನಾರ್ಹ ಸಂಖ್ಯೆಯಲ್ಲಿ ವರ್ಣರಂಜಿತ ಗೂಡುದೀಪಗಳನ್ನು ಸ್ಪರ್ಧೆಯಲ್ಲಿ ಪ್ರದರ್ಶಿಸಲಾಯಿತು. ಸ್ಪರ್ಧೆಯ ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.


ಅತಿಥಿಗಳಾಗಿ ಬಜಂಗದಳ ವಿಭಾಗ ಸಂಚಾಲಕರಾದ ಶ್ರೀ ಭುಜಂಗ ಕುಲಾಲ್, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀ ಶಿವಾನಂದ ಮೆಂಡನ್, ವಿಶ್ವ ಹಿಂದೂ ಪರಿಷತ್ ಕಾವೂರು ಪ್ರಖಂಡದ ಕಾರ್ಯದರ್ಶಿ ಶ್ರೀ ಭವಾನಿ ಶಂಕರ್ , ಶ್ರೀ ದುರ್ಗಾಪರಮೇಶ್ವರೀ ನಾಗಕನ್ನಿಕಾ ದೇವಸ್ಥಾನದ ಮುಕ್ತೇಸರುಗಳಾದ ಶ್ರೀ ಜೆ ಬಾಲಕೃಷ್ಣ ಕೊಟ್ಟಾರಿ ಮತ್ತು ಶ್ರೀ ರಮಾನಂದ ಭಂಡಾರಿ ಹಾಗೂ ವಿಶ್ವ ಹಿಂದೂ ಪರಿಷತ್ ದೇರೆಬೈಲ್ ಘಟಕದ ಅಧ್ಯಕ್ಷರಾದ ಶ್ರೀ ಗುರುಪ್ರಸಾದ್ ಕಡಂಬಾರ್, ವಿಶ್ವ ಹಿಂದೂ ಪರಿಷತ್ ದೇರೆಬೈಲ್ ಘಟಕದ ಪ್ರಮುಖರಾದ ಶ್ರೀ ಪ್ರಸಾದ್ ಕೊಂಚಾಡಿ, ಸದಾಶಿವ ದೇವಾಡಿಗ, ರಾಜೇಶ್, ಶಶಿಕಾಂತ್, ಶ್ರೀಕಾಂತ್ ಹಾಗೂ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷರಾದ ಶ್ರೀ ಗೋಪಾಲ್ ಕುತ್ತಾರ್, ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಹರೀಶ್ ಶೇಟ್, ಜಿಲ್ಲಾ ಸಹ ಸೇವಾ ಪ್ರಮುಖ್ ಶ್ರೀ ದೀಪಕ್ ಮರೋಳಿ ಮತ್ತು ಸಂಘಟನೆಯ ಪ್ರಮುಖರಾದ ದಿಲೀಪ್, ಯತೀಶ್, ಚಂದ್ರಕಾಂತ್, ವಿಜಯ್ ಕಾವೂರು, ಭಾಸ್ಕರ್ ಸಾಲಿಯಾನ್ ಉಪಸ್ಥಿತರಿದ್ದರು.


ಇದೇ ಸಂದರ್ಭದಲ್ಲಿ ಶ್ರೀ ರಾಮ ಭಜನಾ ಮಂದಿರ ದೇರೆಬೈಲ್,  ಭಕ್ತಿ ಸಂಕೀರ್ತನಾ ಬಳಗ ಲ್ಯಾಂಡ್ಲಿಂಕ್ಸ್ ಇವರಿಂದ ಭಜನಾ ಕಾರ್ಯಕ್ರಮ ಮತ್ತು ಶ್ರೀ ಸುಬ್ರಮಣ್ಯ ಭಜನಾ ಮಂಡಳಿ ನೀರುಮಾರ್ಗ ಇವರಿಂದ ಕುಣಿತ ಭಜನೆಯು ನಡೆಯಿತು.


ಸಾಂಪ್ರದಾಯಿಕ ಮತ್ತು ಆಧುನಿಕ ವಿಭಾಗಗಳಲ್ಲಿ ನಡೆದ ಸಾರ್ವಜನಿಕ ಗೂಡು ದೀಪ ಸ್ಪರ್ಧೆಯಲ್ಲಿ ಜಿಲ್ಲೆಯ ನೂರಾರು ಮಂದಿ ತಮ್ಮ ಗೂಡು ದೀಪಗಳನ್ನು ಪ್ರದರ್ಶಿಸಿದರು. ಶ್ರೀ ರಾಮು ಮಾಯಿಪ್ಪಾಡಿ ಅವರು ಗಣ್ಯರಿಗೆ ಸ್ವಾಗತಿಸಿದರು. ವಿಶ್ವ ಹಿಂದೂ ಪರಿಷತ್ ದೇರೆಬೈಲ್ ಘಟಕದ ಕಾರ್ಯದರ್ಶಿ ಶ್ರೀ ಜನಾರ್ದನ ಆವರು ಧನ್ಯವಾದ ಅರ್ಪಿಸಿದರು ಮತ್ತು ಪ್ರಿತೇಶ್ ಕೊಂಚಾಡಿ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ



web counter

0 تعليقات

إرسال تعليق

Post a Comment (0)

أحدث أقدم