ಬೆಂಗಳೂರು: ನವೆಂಬರ್ 1 ಕನ್ನಡ ರಾಜ್ಯೋತ್ಸವ ಪ್ರಯುಕ್ತ (ಅಕ್ಟೋಬರ್ 28) ರಂದು ನಿನ್ನೆ ನಡೆದ ಕೋಟಿ ಕಂಠ ಗಾಯನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕನ್ನಡ ಮತ್ತು ಸಂಸ್ಕೃತಿಯಿಂದ ಆಯೋಜಿಸಲ್ಪಟ್ಟ ಕೋಟಿ ಕಂಠ ಗಾಯನ ಕಾರ್ಯಕ್ರಮಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು, ಗಿನ್ನೆಸ್ ದಾಖಲೆಯತ್ತ ಹೆಜ್ಜೆಯಿಟ್ಟಿದೆ.
ರಾಜ್ಯಾದ್ಯಂತ 1.50 ಕೋಟಿ ಜನರು ಕನ್ನಡ ಹಾಡಿಗೆ ಧ್ವನಿಯಾಗಿದ್ದಾರೆ. ಶಿಕ್ಷಣ ಇಲಾಖೆ ವ್ಯಾಪ್ತಿಯ ಎಲ್ಲಾ ಶಾಲೆಗಳಲ್ಲಿ ಅ.28 ರಂದು ಬೆಳಗ್ಗೆ 11 ಗಂಟೆಗೆ ನನ್ನ ಹಾಡು ನನ್ನ ಹಾಡು ಸಮೂಹ ಗೀತೆ ಗಾಯನ ಏರ್ಪಡಿಸಿ ಮೊದಲು ನಾಡಗೀತೆ 'ಜಯ ಭಾರತ ಜನನಿಯ ತನುಜಾತೆ ಹಾಡಬೇಕು' ಎಂದು ಸೂಚನೆ ನೀಡಲಾಗಿತ್ತು.
ಅದೇ ರೀತಿ ಕುವೆಂಪುರವರ 'ಬಾರಿಸು ಕನ್ನಡ ಡಿಂಡಿಮವ', ಡಿ ಎಸ್ ಕರ್ಕಿ ಅವರ 'ಹಚ್ಚೇವು ಕನ್ನಡ ದೀಪ', ನಾಡೋಚ ಚನ್ನವೀರ ಕಣವಿ ಅವರ 'ವಿಶ್ವ ವಿನೂತನ ವಿದ್ಯಾ ಚೇತನ', ಹಂಸಲೇಖರವರ 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಹಾಗೂ ಉಯಿಲಗೋಳ ನಾರಾಯಣರಾಯರ 'ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು' ಹಾಡನ್ನು ಹಾಡಿಸಬೇಕು ಎಂದು ಸೂಚನೆ ನೀಡಲಾಗಿತ್ತು. ಅಂತೆಯೇ ಕೋಟಿ ಕಂಠ ಗಾಯನ ಕಾರ್ಯಕ್ರಮಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು,. ರಾಜ್ಯಾದ್ಯಂತ 1.50 ಕೋಟಿ ಜನರು ಕನ್ನಡ ಹಾಡಿಗೆ ಧ್ವನಿಯಾಗಿದ್ದಾರೆ.
ಬೆಂಗಳೂರಿನ ಕಂಠೀರವ ಸ್ಟೇಡಿಯಂ ನಲ್ಲಿ ನಡೆದ ಕೋಟಿ ಕಂಠ ಗಾಯನ ಕಾರ್ಯಕ್ರಮ ಗಿನ್ನೆಸ್ ದಾಖಲೆಯತ್ತ ಸಾಗುತ್ತಿದೆ, ಈ ಬಗ್ಗೆ ಗಿನ್ನಿಸ್ ಪ್ರಶಸ್ತಿ ಸಮಿತಿಯ ಸದಸ್ಯರು ಕಾರ್ಯಕ್ರಮಕ್ಕೆ ಆಗಮಿಸಿ ವೀಕ್ಷಣೆ ನಡೆಸಿದರು.
ರಾಜ್ಯ ಸರ್ಕಾರದಿಂದ ಅಕ್ಟೋಬರ್ 28, 2022ರಂದು ನನ್ನ ನಾಡು, ನನ್ನ ಹಾಡು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
Post a Comment