ಮಂಗಳೂರು: ಉಡುಪಿಯ ಫೋಕಸ್ ಸ್ಟುಡಿಯೋ ರಮೇಶ್ ಅರವಿಂದ್ ಗೆ ಯಕ್ಷಗಾನದ ವೇಷ ಹಾಕಿಸಿ ಫೋಟೋ ಶೂಟ್ ಮಾಡಿಸಿದೆ. ಸಾಂಪ್ರದಾಯಿಕವಾಗಿ ಬಣ್ಣ ಹಾಕಿ ಕಿರೀಟ ತೊಟ್ಟು ಥೇಟ್ ಯಕ್ಷಗಾನ ಕಲಾವಿದರಂತೇ ರಮೇಶ್ ಕುಣಿತ ಹಾಕಿದ್ದಾರೆ.
ಯಕ್ಷಗಾನದ ವೇಷ ಹಾಕಬೇಕು ಎನ್ನುವುದು ನನ್ನ ಕನಸಾಗಿತ್ತು. ಅದು ಈ ಫೋಟೋ ಶೂಟ್ ಮೂಲಕ ನೆರವೇರಿದೆ.
ಈ ಭಾರೀ ತೂಕದ ವೇಷ ಹಾಕಿದ ಸಹಜವಾಗಿಯೇ ನಮ್ಮಲ್ಲಿ ಪರ್ಫಾರ್ಮ್ ಮಾಡುವ ಆವೇಶ ಬರುತ್ತದೆ. ಅದಕ್ಕೆ ಎಲ್ಲಾ ಯಕ್ಷಗಾನ ಕಲಾವಿದರಿಗೆ ನನ್ನದೊಂದು ನಮನ ಎಂದು ರಮೇಶ್ ಹೇಳಿದ್ದಾರೆ.
إرسال تعليق