ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಜ್ಯುವೆಲ್ಲರಿ ಶಾಪ್ ನಿಂದ ಉಂಗುರ ಕದ್ದು ಸಿಕ್ಕಿಬಿದ್ದ ಕಳ್ಳ

ಜ್ಯುವೆಲ್ಲರಿ ಶಾಪ್ ನಿಂದ ಉಂಗುರ ಕದ್ದು ಸಿಕ್ಕಿಬಿದ್ದ ಕಳ್ಳ

 


ಉಡುಪಿ : ಜ್ಯುವೆಲ್ಲರಿಗೆ ಗ್ರಾಹಕನ ಸೋಗಿನಲ್ಲಿ ಬಂದ ಕಳ್ಳನೊಬ್ಬ ಉಂಗುರು ಕದಿಯುವಾಗ ಸಿಕ್ಕಿಬಿದ್ದ ಘಟನೆಯೊಂದು ಉಡುಪಿ ನಗರದ ಕೆನರಾ ಜ್ಯುವೆಲ್ಲರಿಯಲ್ಲಿ ನಡೆದಿದೆ.

ಕಳ್ಳ ಕಾಸರಗೋಡು ನಿವಾಸಿ ಸಾಜು.

ಈತ ನಗರದ ಕೆನರಾ ಜ್ಯುವೆಲ್ಲರಿಗೆ ಗ್ರಾಹಕನ ಸೋಗಿನಲ್ಲಿ ತೆರಳಿ ಉಂಗುರ ಬೇಕು ಎಂದು ಕೇಳಿದ್ದಾನೆ. ಅದನ್ನು ತೋರಿಸುವಾಗ ಚೈನ್ ತೋರಿಸಿ ಎಂದಿದ್ದು, ಜ್ಯುವೆಲ್ಲರಿಯವರು ಚೈನ್ ತೋರಿಸುವಾಗ ಈತ ಉಂಗುರ ಹಿಡಿದುಕೊಂಡು ಓಡಿದ್ದಾನೆ.

ಜ್ಯುವೆಲ್ಲರಿ‌ಯ ಮಾಲಕ ಸ್ಥಳೀಯರ ನೆರವಿನಿಂದ ಕಳ್ಳನನ್ನು‌ ಬೆನ್ನಟ್ಟಿ ಹಿಡಿದು ಅವನಿಂದ ಉಂಗುರ ವಾಪಾಸು ಪಡೆದುಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ.

0 تعليقات

إرسال تعليق

Post a Comment (0)

أحدث أقدم