ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಉತ್ತರಾಖಂಡ ದಲ್ಲಿ ಕರ್ತವ್ಯ ದಲ್ಲಿದ್ದ ಸೈನಿಕ ಹೃದಯಾಘಾತದಿಂದ ನಿಧನ

ಉತ್ತರಾಖಂಡ ದಲ್ಲಿ ಕರ್ತವ್ಯ ದಲ್ಲಿದ್ದ ಸೈನಿಕ ಹೃದಯಾಘಾತದಿಂದ ನಿಧನ

 


ಸೋಮವಾರಪೇಟೆ: ತಾಲ್ಲೂಕಿನ ತಾಕೇರಿ ಗ್ರಾಮದ ಸೈನಿಕ ನಾಪಂಡ ಮಹೇಶ್ (46) ಉತ್ತರಖಂಡ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗಲೇ ಮಂಗಳವಾರ ಹೃದಯಾಘಾತದಿಂದ ನಿಧನರಾದರು.


ಅವರು ಭಾರತೀಯ ಭೂ ಸೇನೆಯ ಎಲೆಕ್ಟ್ರಾನಿಕ್ಸ್ ಆಂಡ್ ಮೆಕಾನಿಕಲ್ ಎಂಜಿನಿಯರ್ಸ್ (ಇಎಂಇ) ವಿಭಾಗದಲ್ಲಿ ಸುಬೇದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.


1999ರಲ್ಲಿ ಸೇನೆಗೆ ಸೇರ್ಪಡೆಗೊಂಡಿದ್ದ ಅವರು, ಹೈದರಾಬಾದ್, ಬೆಂಗಳೂರು, ಜಮ್ಮು ಕಾಶ್ಮೀರದಲ್ಲಿ ಸೇವೆ ಸಲ್ಲಿಸಿದ್ದರು.




ಇಲ್ಲಿನ ತಮ್ಮ ಮನೆಯ ಸುತ್ತ ಕಾಂಪೌಂಡ್ ನಿರ್ಮಿಸುತ್ತಿರುವ ಬಗ್ಗೆ ಮಧ್ಯಾಹ್ನ 12 ಗಂಟೆಗೆ ಪತ್ನಿಯೊಂದಿಗೆ ಮೊಬೈಲ್‌ನಲ್ಲಿ ಮಾತನಾಡಿದ್ದರು. ಬಳಿಕ ಅರ್ಧ ಗಂಟೆಯಲ್ಲೇ ನಿಧನ ಸುದ್ದಿ ತಿಳಿದು ಇಡೀ ಕುಟುಂಬ ದುಖಃಸಾಗರದಲ್ಲಿ ಮುಳುಗಿದೆ.


ಮೃತರಿಗೆ ಪತ್ನಿ ವಿನಂತಿ, ತಾಯಿ ಮಲ್ಲಿಗೆ, ಪುತ್ರಿ, ಪುತ್ರ ಇದ್ದಾರೆ. ಪಾರ್ಥಿವ ಶರೀರವು ಬುಧವಾರ ಸಂಜೆ ಅಥವಾ ಗುರುವಾರ ಗ್ರಾಮಕ್ಕೆ ತಲುಪಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.


0 تعليقات

إرسال تعليق

Post a Comment (0)

أحدث أقدم