ರಾಯಚೂರು: ರಸ್ತೆ ಅಡ್ಡ ಬಂದ ನಾಯಿ ಉಳಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ಕಾರು ಪಲ್ಟಿಯಾಗಿ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆಯೊಂದು ರಾಯಚೂರು ತಾಲೂಕಿನ ಕೆರೆಬೂದೂರು ಗ್ರಾಮದಲ್ಲಿ ಸಂಭವಿಸಿದೆ.
ರಾಯಚೂರಿನ ಏಗನೂರು ಟೆಂಪಲ್ ಹತ್ತಿರದ ಲಕ್ಷ್ಮೀಪುರಂ ಲೇಔಟ್ ನಿವಾಸಿ ಸುಧೀಂದ್ರ(44) ಮೃತ ವ್ಯಕ್ತಿ ಎಂದು ತಿಳಿದು ಬಂದಿದೆ.
ತುಂಗಭದ್ರಾ ಗ್ರಾಮದಲ್ಲಿ ತಮ್ಮ ಕೆಲಸ ಮುಗಿಸಿ ವಾಪಸ್ ಬರುವಾಗ ಅಪಘಾತ ಸಂಭವಿಸಿದೆ.
ಕಾರಲ್ಲಿ ಸುಧೀಂದ್ರ ವಾಪಸ್ ಬರುವಾಗ ಕಾರಿಗೆ ಏಕಾಏಕಿ ನಾಯಿ ಅಡ್ಡ ಬಂದಿದೆ. ಆಗ ಅದರ ಜೀವವನ್ನು ಉಳಿಸಲು ಕಾರು ಪಕ್ಕಕ್ಕೆ ತಿರುಗಿಸಿದ್ದು, ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದರು.
ಇಡಪನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
إرسال تعليق