ಮಲ್ಪೆ : ಸಮುದ್ರದ ಮಧ್ಯೆ ಮೀನು ಬೇಟೆಗೆ ಹಾಕಲಾಗಿದ್ದ ಬಲೆಯ ಮೇಲೆ ಭಾರತೀಯ ಕೋಸ್ಟ್‌ಗಾರ್ಡ್‌ನ ಬೋಟ್ ಸಂಚರಿಸಿ ಬಲೆ ಸಂಪೂರ್ಣ ಹಾನಿಯಾದ ಘಟನೆಯೊಂದು ರವಿವಾರ ಸಂಜೆ ಸಂಭವಿಸಿದೆ.
ಮಲ್ಪೆ ಬಂದರಿನ ಗರುಡ ಪರ್ಸಿನ್ ಬೋಟ್ ಮಲ್ಪೆ ನೇರ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿತ್ತು.
ಕಳೆದ ಕೆಲವು ದಿನಗಳಿಂದ ಕೋಸ್ಟ್‌ಗಾರ್ಡ್‌ನವರು ಪರ್ಸಿನ್ ಬೋಟುಗಳ ತಪಾಸಣೆ ನಡೆಸುತ್ತಿದ್ದು, ಇಂದು ಗರುಡ ಬೋಟ್‌ನ ಬಳಿ ಬಂದ ಕೋಸ್ಟ್‌ಗಾರ್ಡ್‌ನವರ ಬೋಟ್ ಮೀನಿಗೆಂದು ಹರಡಿದ್ದ ಬಲೆಯ ಮೇಲೆ ಚಲಿಸಿತು.
ಇದರಿಂದಾಗಿ ಬೋಟ್ ನ ಫ್ಯಾನ್‌ಗೆ ಸಿಲುಕಿಕೊಂಡ ಬಲೆ ಸಂಪೂರ್ಣ ಹಾನಿಗೀಡಾಗಿ 8 ಲಕ್ಷ ರೂ.ಗೂ ಅಧಿಕ ನಷ್ಟವಾಗಿದೆ ಎಂದು ತಿಳಿದು ಬಂದಿದೆ
Post a Comment