ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ರಸ್ತೆ ದುರಸ್ತಿ ಬಗ್ಗೆ ಪುತ್ತೂರಿನ ಯುವಕ ಮಂಗಳೂರಿನಲ್ಲಿ ಪ್ರತಿಭಟನೆ

ರಸ್ತೆ ದುರಸ್ತಿ ಬಗ್ಗೆ ಪುತ್ತೂರಿನ ಯುವಕ ಮಂಗಳೂರಿನಲ್ಲಿ ಪ್ರತಿಭಟನೆ

 


ಮಂಗಳೂರು: ಮೊನ್ನೆ ಪ್ರಧಾನಿ ನರೇಂದ್ರ ಮೋದಿಯವರು ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದರು.


 ಪ್ರಧಾನಿಯವರ ಆಗಮನದ ಹಿನ್ನೆಲೆ ಜಿಲ್ಲಾಡಳಿತ ಶೀಘ್ರವಾಗಿ ರಸ್ತೆ ಕಾಮಗಾರಿಯನ್ನು ಕೈಗೊಂಡಿತ್ತು.


ಆದರೆ ಮೋದಿಯವರು ಭೇಟಿ ನೀಡಿ ತೆರಳಿದ ಬಳಿಕ ರಸ್ತೆ ಕಾಮಗಾರಿ ನಡೆಸಿದ ಸ್ಥಳದಲ್ಲಿ ಮತ್ತೆ ಗುಂಡಿ ಬಿದ್ದಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದರ ಫೋಟೋ ಹರಿದಾಡುತ್ತಿದ್ದಂತೆ ಎಚ್ಚೆತ್ತ ಜಿಲ್ಲಾಡಳಿತ ಒಂದಿಷ್ಟು ರಿಪೇರಿ ಕೆಲಸ ಮಾಡಿತ್ತು.


ಇದೀಗ ಯುವಕನೊಬ್ಬ ನರೇಂದ್ರ ಮೋದಿಯವರು ಮತ್ತೆ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡುವಂತೆ ಮನವಿ ಮಾಡಿದ್ದಾರೆ. 


ಇದಕ್ಕೆ ಕಾರಣ ಹದಗೆಟ್ಟ ರಸ್ತೆ ಅವ್ಯವಸ್ಥೆ. ಪುತ್ತೂರಿನ ಲಿಖಿತ್ ರೈ ಎಂಬ ಯುವಕ 'ಕಮ್ ಬ್ಯಾಕ್ ಮೋದಿ, ರೋಡ್ ವರ್ಕ್ ಸೀರ್ಫ್ ಮೋದಿ ಹೈ ತೋ ಮುಮ್ಕೀನ್ ಹೈ. ಪಾಟ್ ಹೋಲ್ ಸೇ ಆಜಾದಿ, ವಿ ಡಿಮ್ಯಾಂಡ್ ಸೇಫ್ ರೋಡ್ಸ್ ಎಂಬ ಫಲಕ ಹಿಡಿದು ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದಾರೆ.


ಮಂಗಳೂರಿನ ರಾಷ್ಟ್ರೀಯ ಹೆದ್ದಾರಿಯ ಪ್ರಮುಖ ಜಂಕ್ಷನ್ ನಂತೂರಿನಲ್ಲಿ ಅವರು ಒಂದು ಗಂಟೆಗಳ ಕಾಲ ಈ ಪ್ರತಿಭಟನೆ ನಡೆಸಿದ್ದರು. 


 ಈ ವೇಳೆ ಪ್ರತಿಭಟನೆ ನಡೆಸಿದ ಲಿಖಿತ್ ರೈ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ನರೇಂದ್ರ ಮೋದಿಯವರು ಮತ್ತೆ ಬರಲಿ. ಇದರಿಂದಾಗಿ ಆದರೂ ರಸ್ತೆ ಸರಿಯಾಗಲಿ ಎಂದು ಲಿಖಿತ್ ರೈ ಬಯಸಿದ್ದಾರೆ.


0 تعليقات

إرسال تعليق

Post a Comment (0)

أحدث أقدم