ಪುತ್ತೂರು: ಮುಸ್ಲಿಂ ಯುವಕನೊಬ್ಬ ತಾನು ಹಿಂದೂ ಎಂದು ನಂಬಿಸಿ ಹಿಂದೂ ಯುವತಿ ಜೊತೆಗೆ ತಿರುಗಾಡುತ್ತಿದ್ದ ಅನ್ಯಕೋಮಿನ ಯುವಕನೊಬ್ಬನನ್ನು ಕಾರ್ಯಕರ್ತರು ಪತ್ತೆ ಹಚ್ಚಿ ಪೊಲೀಸ್ ಠಾಣೆಗೆ ಕರೆದೊಯ್ದ ಘಟನೆಯೊಂದು ಪುತ್ತೂರಿನಲ್ಲಿ ನಡೆದಿದೆ.
ಕುಂದಾಪುರ ಮೂಲದ ಹಿಂದೂ ಯುವತಿ ಹಾಗೂ ಕೋಟೇಶ್ವರದ ಮುಸ್ಲಿಂ ಹುಡುಗ ಜೊತೆಯಾಗಿ ಪುತ್ತೂರಿನಲ್ಲಿ ಪತ್ತೆಯಾಗಿದ್ದಾರೆ.
ಅನ್ಯಕೋಮಿನ ಯುವಕ ಅಮೀರ್ ಎಂದು ತಿಳಿದುಬಂದಿದೆ
ಹಿಂದೂ ಯುವತಿಗೆ ಪುತ್ತೂರಿನಲ್ಲಿ ಮಾರ್ಕೆಟಿಂಗ್ ಕೆಲಸ ಕೊಡಿಸುವ ನೆಪವೊಡ್ಡಿ ಈತ ಲವ್‌ಜಿಹಾದ್‌ಗೆ ಯತ್ನಿಸಿದ್ದಾನೆ. ಇವರು ಹಲವು ಕಡೆಗಳಲ್ಲಿ ಸುತ್ತಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಕುಂದಾಪುರದ ಹಿಂದೂ ಸಂಘಟನೆಗಳು ಇವರ ಬಗ್ಗೆ ಪುತ್ತೂರು ಸಂಘಟನೆಗಳಿಗೆ ಮಾಹಿತಿ ನೀಡಿದ್ದು ಈ ಹಿನ್ನೆಲೆ ಅವರು ಈ ಜೋಡಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
Post a Comment