ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಾಫಿ ನಾಡು ಚಂದು ಅವರ ಇನ್ಸ್ಟಾಗ್ರಾಂ ಖಾತೆ ಹ್ಯಾಕ್ ಮಾಡಿದ ದುಷ್ಕರ್ಮಿಗಳು

ಕಾಫಿ ನಾಡು ಚಂದು ಅವರ ಇನ್ಸ್ಟಾಗ್ರಾಂ ಖಾತೆ ಹ್ಯಾಕ್ ಮಾಡಿದ ದುಷ್ಕರ್ಮಿಗಳು

 


ಚಿಕ್ಕಮಗಳೂರು : ಸೋಷಿಯಲ್ ಮೀಡಿಯಾದಲ್ಲಿ ಬರ್ತ್‌ಡೇ ವಿಶ್ ಮಾಡುತ್ತಲೇ ಸಾಕಷ್ಟು ಖ್ಯಾತಿ ಗಳಿಸಿದ ಕಾಫಿ ನಾಡು ಚಂದುಗೆ ಇದೀಗ ಸಂಕಷ್ಟವೊಂದು ಎದುರಾಗಿದೆ.


 ಚಿಕ್ಕಮಗಳೂರಿನಲ್ಲಿ ಆಟೋ ಓಡಿಸಿಕೊಂಡು ಸ್ವತಃ ಪ್ರತಿಭೆಯಿಂದಲೇ ಮೇಲೆ ಬಂದಿರೋ ಕಾಫಿ ನಾಡು ಚಂದು ಅವರ ಇನ್ಸ್ಟಾಗ್ರಾಂ ಖಾತೆ ದುಷ್ಕರ್ಮಿಗಳು ಹ್ಯಾಕ್ ಮಾಡಿದ್ದಾರೆ.


ನಾನು ಶಿವಣ್ಣ ಪುನೀತ್ ಅಣ್ಣನ ಅಭಿಮಾನಿ ಎಂದು ವೀಡಿಯೋ ಶುರು ಮಾಡುತ್ತಿದ್ದ ಚಂದು ಅವರ ಇನ್ಸ್ಟಾಗ್ರಾಂ ಅಕೌಂಟ್ ಕಾಣೆಯಾಗಿದೆ.


 ಬರ್ತ್‌ಡೇ ವಿಶ್ ಮಾಡುವ ಮೂಲಕ 4 ಲಕ್ಷಕ್ಕೂ ಅಧಿಕ ಫ್ಯಾನ್ಸ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಹೊಂದಿದ್ದರು. ಈಗ ಹಳ್ಳಿ ಪ್ರತಿಭೆಯ ಚಂದು ಖಾತೆಯ ಮೇಲೆ ಹ್ಯಾಕರ್ಸ್ ಕಣ್ಣು ಬಿದ್ದಿದೆ. ಅವರ ಅಕೌಂಟ್ ಹ್ಯಾಕ್ ಮಾಡಲಾಗಿದೆ.


ಇತ್ತೀಚೆಗಷ್ಟೇ ಶಿವಣ್ಣ ಮತ್ತು ನಿರೂಪಕಿ ಅನುಶ್ರೀ ಅವರನ್ನು ಚಂದು ಭೇಟಿಯಾಗಿ ಬಂದಿದ್ದರು. ಸಾಮಾಜಿಕ ಜಾಲತಾಣದಲ್ಲಿ ಕಾಫಿನಾಡು ಚಂದು ಸದಾ ಸಕ್ರಿಯರಾಗಿದ್ದರು. ಇದೀಗ ಅವರ ಇನ್ಸ್ಟಾಗ್ರಾಂ ಅಕೌಂಟ್ ಹ್ಯಾಕ್ ಆಗಿದ್ದಕ್ಕೆ ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ.


0 تعليقات

إرسال تعليق

Post a Comment (0)

أحدث أقدم