ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವಿದ್ಯಾರ್ಥಿಗಳಿಂದಲೇ ಶಿಕ್ಷಕರ ದಿನಾಚರಣೆ: ಉಡುಪಿ ಶಾಸಕರಿಂದ ಮಹತ್ವದ ಹೆಜ್ಜೆ

ವಿದ್ಯಾರ್ಥಿಗಳಿಂದಲೇ ಶಿಕ್ಷಕರ ದಿನಾಚರಣೆ: ಉಡುಪಿ ಶಾಸಕರಿಂದ ಮಹತ್ವದ ಹೆಜ್ಜೆ


ಇಂದು ಸೋಮವಾರ ಸಪ್ಟಂಬರ್ 5. ಶಿಕ್ಷಕರ ದಿನಾಚರಣೆ. ಹೀಗೇ ಯಾವುದೋ ಕೆಲಸದ ನಿಮಿತ್ತ ಉಡುಪಿ ಶಾಸಕರಲ್ಲಿ ಮಾತಾಡೋದಿತ್ತು.‌ ಅವರು ಸ್ಥಳೀಯ ಒಳಕಾಡು ಸಂಯುಕ್ತ ಪ್ರೌಢ ಶಾಲೆಯಲ್ಲಿ ಕಾರ್ಯಕ್ರಮದಲ್ಲಿ ಇರುವ ಮಾಹಿತಿ ಬಂದ ಹಿನ್ನೆಲೆಯಲ್ಲಿ ಅಲ್ಲೇ ಹೋದೆ. ಆದ್ರೆ ಅಲ್ಲಿ ಕಂಡ ಒಂದು ಹೃದಯಂಗಮ ಹಾಗೂ ಮನೋಜ್ಞ ದೃಶ್ಯವೊಂದಕ್ಕೆ ಸಾಕ್ಷಿಯಾದೆ ಅನ್ನೋದು ಅತ್ಯಂತ ಸಂತೋಷದ ಸಂಗತಿ. ಶಾಲೆಯ ಮೈದಾನದಲ್ಲಿ ಸುತ್ತಲೂ ಕುಳಿತು  ಚಪ್ಪಾಳೆಯನ್ನು ತಟ್ಟುತ್ತಾ ಸಂಭ್ರಮಿಸುತ್ತಿದ್ದರು. ಮೈದಾನದ ನಡುವೆ ಶಾಲೆಯ ಶಿಕ್ಷಕ ಶಿಕ್ಷಕಿಯರು ವಿವಿಧ ಸ್ಫರ್ಧೆಗಳಲ್ಲಿ ಭಾಗಿಯಾಗಿ ಸಂಭ್ರಮಿಸುತ್ತಿದ್ದರು. ಪ್ರತಿಯೊಂದು ಸ್ಪರ್ಧೆಗೆ ಕ್ರೀಡಾಳುಗಳಾಗಿ ಶಿಕ್ಷಕ ಶಿಕ್ಷಕಿಯರು ಮೈದಾನಕ್ಕೆ ಬರುವಾಗಲೂ ಶಾಲಾ ಘೋಷ್ ತಂಡದ ಮಕ್ಕಳು ವಾದ್ಯಘೋಷಗಳನ್ನು ಮೊಳಗಿಸಿ ಸ್ವಾಗತಿಸುತ್ತಾ ಹುರಿದುಂಬಿಸುತ್ತಿದ್ದರು.‌ ಮಕ್ಕಳು ಜೋರಾದ ಚಪ್ಪಾಳೆಯ ಸದ್ದು ಅಲ್ಲಿನ ವಾತಾವರಣದ ಕಳೆಯನ್ನು ಹೆಚ್ಚಿಸಿತ್ತು. ಇಷ್ಟೇ ಹೇಳಿದ್ರೆ ಸ್ವಾರಸ್ಯ ಇರಲ್ಲ.


ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಈ ಸಂಭ್ರಮಕ್ಕೆ ಅವಕಾಶ ಕೊಟ್ಟದ್ದು ಶಿಕ್ಷಕರ ದಿನಾಚರಣೆ! ಅನ್ನೋದು ರೋಚಕ ಸಂಗತಿ. ವರ್ಷವೂ ಇದು ಬರ್ತದಲ್ವಾ? ಅದ್ರಲ್ಲೇನು ವಿಶೇಷ ಅನ್ಬೋದು. ಅಲ್ಲೇ ಇರೋದು ಸ್ವಾರಸ್ಯ. ಈ ತನಕ ಶಿಕ್ಷಕರ ದಿನಾಚರಣೆಯ ದಿನ ಮಕ್ಕಳು ಗುರುಗಳಿಗೆ ಬಾಯಲ್ಲಷ್ಟೇ ಶುಭಾಶಯ ಹೇಳಿಯೋ ಅಥವಾ ಒಂದು ಗುಲಾಬಿ ಕೊಟ್ಟೋ ಶುಭ ಹೇಳಿ ಮುಗಿಸುತ್ತಿದ್ದರು. ಉಳಿದಂತೆ ಜಿಲ್ಲಾ ಮಟ್ಟದಲ್ಲಿ ಸರ್ಕಾರದ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಶಸ್ತಿ ಪ್ರದಾನಗಳು ಕೇವಲ ಶಿಕ್ಷಕರುಗಳ ಮತ್ತು ಅಧಿಕಾರಿಗಳ ಜನಪ್ರತಿನಿಧಿಗಳ  ಉಪಸ್ಥತಿಯಲ್ಲಷ್ಟೇ ನಡೀತಾ ಇತ್ತು. ಮಕ್ಕಳಿಗೆ ಶಾಲೆಗೆ ರಜೆ ಕೊಟ್ಟು ಕಳಿಸುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ ರಾಜ್ಯದ ಅತ್ಯಂತ ದೂದದೃಷ್ಟಿಯ ಬೆರಳೆಣಿಕೆಯ ಶಾಸಕರಲ್ಲಿ ಒಬ್ಬರು ಅಂತ ಉಡುಪಿಯ ಜನ ಹೆಮ್ಮೆಯಿಂದ ಹೇಳಿಕೊಳ್ಳಬಹುದಾದ ಶ್ರೀ ಕೆ ರಘುಪತಿ ಭಟ್ಟರು ಸರ್ಕಾರಕ್ಕೆ ಮನವಿ ಮಾಡಿ ಶಿಕ್ಷಕರ ದಿನಾಚರಣೆಯನ್ನು ಆಯಾ ಶಾಲೆಗಳಲ್ಲೇ ಮಕ್ಕಳ ಸಮ್ಮುಖ ದಲ್ಲೇ ಜೊತೆಯಾಗಿ ಸಂಭ್ರಮದಿಂದ ಆಚರಿಸುವಂತಾಗಬೇಕು. ಈ ಮೂಲಕ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವೆ ಆತ್ಮೀಯ ಗುರು ಶಿಷ್ಯ ಬಾಂಧವ್ಯ ಗಟ್ಟಿಗೊಳ್ಳಬೇಕು ಅನ್ನುವ ಕಳಕಳಿಯನ್ನು ವ್ಯಕ್ತಪಡಿಸಿದರು. ಶಾಸಕ ಭಟ್ಟರ ಮನವಿಯನ್ನು ಒಪ್ಪಿದ ಸರ್ಕಾರ ಈ ಸಂಬಂಧ ಸುತ್ತೋಲೆ ಹೊರಡಿಸಿ ಶಾಲೆಗಳಲ್ಲೇ ಈ ಆಚರಣೆಗೆ ಆದೇಶಿಸಿತು. ಅದರ ಪ್ರತಿಫಲವೇ ನಾನು ಮೇಲೆ ಉಲ್ಲೇಖಿಸಿದ ಒಳಕಾಡು ಶಾಲೆಯ ಘಟನೆ. ಅಲ್ಲಿ ಉಪಸ್ಥತಿತರಿದ್ದ ಮಕ್ಕಳಲ್ಲಿ ಗುರುಗಳಲ್ಲಿ ಅತ್ಯಂತ ಸಂತೋಷದ ಭಾವ ಉಲ್ಲೇಖನೀಯ. ಮತ್ತು ಇದಕ್ಕೆ ಕಾರಣರಾದ ಶಾಸಕ ರಘುಪತಿ ಭಟ್ ಅಭಿನಂದನೀಯರು.


ಅವರ ಪ್ರಯತ್ನದಿಂದ ಇವತ್ತು ಸಾವಿರಾರು ಶಿಕ್ಷಕರು  ಲಕ್ಷಾಂತರ  ವಿದ್ಯಾರ್ಥಿಗಳೊಂದಿಗೆ ಸ್ಮರಣೀಯವಾಗಿ ಶಿಕ್ಷಕರ ದಿನಾಚರಣೆ ಆಚರಿಸುವ ಸದವಕಾಶ ಒದಗಿರೋದು ನಾಡಿನಲ್ಲಿ ಒಂದು ಮಹತ್ವದ ಹೆಜ್ಜೆಯೇ ಸರಿ.

-ಜಿ ವಾಸುದೇವ ಭಟ್ ಪೆರಂಪಳ್ಳಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 Comments

Post a Comment

Post a Comment (0)

Previous Post Next Post