ಮಡಿಕೇರಿ: ತಲಕಾವೇರಿ ತೀರ್ಥೋದ್ಭವಕ್ಕೆ ಮುಹೂರ್ತ ನಿಗದಿಯಾಗಿದ್ದು ಅಕ್ಟೋಬರ್ 17ರ ಸಂಜೆ 7.21 ಕ್ಕೆ ತೀರ್ಥೋದ್ಭವವಾಗಲಿದೆ. ಅಂದಿನ ದಿನ ಸೋಮವಾರ ಮೇಷ ಲಗ್ನದಲ್ಲಿ ಕಾವೇರಿ ತೀರ್ಥೋದ್ಭವವಾಗಲಿದೆ. ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ತಲಕಾವೇರಿಯಲ್ಲಿ ತೀರ್ಥೋದ್ಭವಕ್ಕೆ ಭಾಗಮಂಡಲ ದೇವಸ್ಥಾನದಲ್ಲಿ ನಡೆದ ಪಂಚಾಂಗ ಶ್ರವಣ ಕಾರ್ಯದಲ್ಲಿ ಈ ಮುಹೂರ್ತ ನಿಗದಿಯಾಗಿದೆ.
ಕಳೆದೆರಡು ವರ್ಷಗಳಿಂದ ಕೋವಿಡ್ ಹಿನ್ನೆಲೆ ಈ ಪವಿತ್ರ ತೀರ್ಥೋದ್ಭವ ಸರಳವಾಗಿ ಆಚರಣೆಗೊಂಡಿತ್ತು. ಈ ಬಾರಿ ತೀರ್ಥೋದ್ಭವಕ್ಕೆ ಭಕ್ತರಿಗೆ ಅವಕಾಶ ಸಿಕ್ಕಿದೆ.
Post a Comment