ಸುರತ್ಕಲ್: ಕಾಂಗ್ರೆಸ್ ಇದ್ದಾಗ ಚುನಾವಣಾ ರಣತಂತ್ರದ ಭಾಗವಾಗಿ ಮಾಡಿದ ಹಲವು ಕಾಮಗಾರಿಗಳಲ್ಲಿ ಎಡವಟ್ಟು ಅಗಿರುವುದರಿಂದ ಇದಕ್ಕೆಲ್ಲಾ ನಾನು ಇಂದು ಜನರಿಗೆ ಉತ್ತರ ಕೊಡುವ ಜವಾಬ್ದಾರಿ ಹೊಂದಿದ್ದೇನೆ ಎಂದು ಶಾಸಕರಾದ ಡಾ.ಭರತ್ ಶೆಟ್ಟಿ ವೈ ಹೇಳಿದರು.
ಸುರತ್ಕಲ್ ನಲ್ಲಿ ಈ ಹಿಂದೆ ಕಾಂಗ್ರೆಸ್ ಅವಧಿಯಲ್ಲಿ ಆರಂಭ ಮಾಡಲಾದ ಹಲವು ಅಭಿವೃದ್ಧಿ ಕಾಮಗಾರಿಗಳು ಯಾಕಾಗಿ ವಿಳಂಬವಾದವು ಹಾಗೂ ಕೆಲವು ಬಹುಕೋಟಿಯ ಕಾಮಗಾರಿ ವಿಫಲವಾದ ಬಗ್ಗೆ ವಿವರವಾದ ಮಾಹಿತಿ ನೀಡಿದರು.
ಕಾನಾ ಬಾಳಾ ರಸ್ತೆ ನಿರ್ಮಾಣಕ್ಕೆ ಈ ಹಿಂದೆ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರಕಾರವಿದ್ದಾಗ ಅಡ್ಡಿ ಪಡಿಸಿದ ಬಗ್ಗೆ ಮೊದಲ ಬಾರಿಗೆ ಬಹಿರಂಗ ಹೇಳಿಕೆ ನೀಡಿದ ಶಾಸಕರು ನನ್ನ ಅವಧಿಯಲ್ಲಿ ಈ ಕೆಲಸ ಆಗಬಾರದೆಂದು ಸಮ್ಮಿಶ್ರ ಸರಕಾರದ ಪ್ರಭಾವಿಗಳು ಅಡ್ಡಿ ಪಡಿಸಿದ್ದರು.
ಬಳಿಕ ಕೊರೊನಾ ಹೊಡೆತದಿಂದ ಚೇತರಿಸಿಕೊಂಡ ಬಳಿಕ ಇದೀಗ ಲೋಕೋಪಯೋಗಿ ಮತ್ತು ರಾಜ್ಯ ಹೆದ್ದಾರಿ ಅಭಿವೃದ್ಧಿ ಅನುದಾನದ ಒಟ್ಟು 19.85 ಕೋಟಿ ವೆಚ್ಚದಲ್ಲಿ ಅಧಿಕೃತವಾಗಿ ಕಾನಾ ಬಾಳ ರಸ್ತೆ ಚತುಷ್ಪಥವಾಗಲಿದ್ದು, ಗುದ್ದಲಿ ಪೂಜೆ ನೆರವೇರಿಲಾಗಿದೆ. ಶೀಘ್ರ ಬಹು ನಿರೀಕ್ಷೆಯ ರಸ್ತೆ ಜನರ ಬಳಕೆಗೆ ಸಿಗಲಿದೆ ಎಂದರು.
ಮಾರುಕಟ್ಟೆ ನಿರ್ಮಾಣ ಕಾಮಗಾರಿಯೂ ಯಾಕಾಗಿ ವಿಳಂಬವಾಯಿತು ಎನ್ನುವುದು ಸರಕಾರವೇ ಅಧಿಕೃತ ಮಾಹಿತಿ ನೀಡಿದೆ. ಸರಿಯಾಗಿ ಭೂಮಿ ಬಿಟ್ಟು ಕೊಡದೆ ಹಾಗೂ ಒಳಚರಂಡಿ ಸ್ಥಳಾಂತರ ಸಹಿತ ವಿವಿಧ ಕಾರಣಗಳಿಂದ ನಷ್ಟವಾಗಿ ಕಾಮಗಾರಿ ಮಾಡಲು ಹಿಂದೇಟು ಈ ಎಲ್ಲಾ ಕಾರಣದಿಂದ ವಿಳಂಬವಾಗಿದ್ದು ಇದೀಗ ಅಂತಿಮ ಗ್ಲೋಬಲ್ ಟೆಂಡರ್ ಕರೆಯಲಾಗಿದೆ ಎಂದರು.
ಈ ಹಿಂದೆ ಮಾಡಲಾದ ಒಳಚರಂಡಿ ವ್ಯವಸ್ಥೆ ಚುನಾವಣೆಯ ನಿದರ್ಶನವಾಗಿದೆ. ಕಳಪೆ ಕಾಮಗಾರಿಯನ್ನು ಪಾಲಿಕೆಯಿಂದ ಪರೀಕ್ಷೆಗೆ ಒಳಪಡಿಸದೆ ಸ್ವಾಧೀನಕ್ಕೆ ತೆಗೆದುಕೊಳ್ಳಲು ಅಂದಿನ ಆಯುಕ್ತರಿಗೆ ಒತ್ತಡ ಹೇರಲಾಯಿತು. ಇದರ ಪರಿಣಾಮವೇ ಸೋರಿಕೆ, ಅಂತರ್ಜಲ ಮಲೀನಕ್ಕೆ ಕಾರಣವಾಯಿತು ಎಂದು ಬಹಿರಂಗ ಪಡಿಸಿದರು.
ನನ್ನ ಅಧಿಕಾರದ ಅವಧಿ ಚುನಾವಣೆಯನ್ನು ಮುಂದಿಟ್ಟುಕೊಂಡು ಅರೆಬರೆ ಕಾಮಗಾರಿ ನಡೆಸುವುದಿಲ್ಲ. ಜನರಿಗೆ ಅಗತ್ಯವಾದ ಕೆಲಸಗಳನ್ನು ದೀರ್ಘಾವಧಿ ಮುಂದಾಲೋಚನೆಯಿಂದ ಮಾಡಲಾಗುವುದು. ಒಂದೆರಡು ತಿಂಗಳು ವಿಳಂಬವಾದರೂ ಸಮರ್ಪಕವಾಗಿ ಮಾಡಿ, ಜನರ ತೆರಿಗೆ ಹಣ ಪೋಲಾಗದಂತೆ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಇದೇ ವೇಳೆ ಸುರತ್ಕಲ್ ನ ಬಹು ಉಪಯೋಗಿ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ, ಸುರತ್ಕಲ್ ಜಂಕ್ಷನ್ ಅಭಿವೃದ್ಧಿ, ಸರ್ವಿಸ್ ರಸ್ತೆ ಕಾಂಕ್ರೀಟಿ ಕರಣ, ಸುರತ್ಕಲ್ , ಕೂಳೂರು, ಕೊಟ್ಟಾರಚೌಕಿ ಮೇಲ್ಸೇತುವೆ ಚತುಷ್ಥಪ ಮತ್ತಿತರ ನಡೆಯಲಿರುವ ಅಭಿವೃದ್ಧಿ ಕಾಮಗಾರಿಗಳ ಮಾಹಿತಿ ನೀಡಿದರು.
ಬಿಜೆಪಿ ಉತ್ತರ ಮಂಡಲ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ, ಹಿರಿಯರಾದ ಮಹಾಬಲ ಪೂಜಾರಿ ಕಡಂಬೋಡಿ, ಪಾಲಿಕೆ ಸದಸ್ಯರಾದ ಸರಿತ ಶಶಿಧರ್, ವರುಣ್ ಚೌಟ, ವೇದಾವತಿ, ಲೋಕೇಶ್ ಬೊಳ್ಳಾಜೆ, ಶ್ವೇತ ಎ, ಶೋಭಾ ರಾಜೇಶ್, ನಯನ ಕೋಟ್ಯಾನ್, ಲಕ್ಷ್ಮೀಶೇಖರ್ ದೇವಾಡಿಗ, ಪ್ರಶಾಂತ್ ಮೂಡಾಯಿ ಕೋಡಿ, ಪ್ರಮುಖರಾದ ಗಣೇಶ್ ಹೊಸಬೆಟ್ಟು, ವಿಠಲ ಸಾಲ್ಯಾನ್, ಯುವ ಮೋರ್ಚಾದ ಭರತ್ ರಾಜ್ ಕೃಷ್ಣಾಪುರ, ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
Post a Comment