ಬೆಂಗಳೂರು : ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿದ್ದರಾಮಯ್ಯೋತ್ಸವ ಕಾರ್ಯಕ್ರಮದ ಯಶಸ್ವಿ ಹಿನ್ನೆಲೆ ಇದೇ ತಿಂಗಳ 26ಕ್ಕೆ ಭೋಜನಕೂಟವನ್ನು ಆಯೋಜನೆ ಮಾಡಿದ್ದಾರೆ.
ಬೆಂಗಳೂರಿನ ಕೊಡವ ಸಮಾಜ ಭವನದಲ್ಲಿ ಮಧ್ಯಾಹ್ನ ಸುಮಾರು 2,000 ಜನರಿಗೆ ಭೋಜನಕೂಟವನ್ನು ಆಯೋಜನೆ ಮಾಡಿದ್ದು ಆಹ್ವಾನಿಸಲಾಗಿದೆ.
ಭೋಜನಕೂಟದಲ್ಲಿ ಕಾಂಗ್ರೆಸ್ ಶಾಸಕರು, ಪರಿಷತ್ ಸದಸ್ಯರು, ಸಂಸದರು, ಕೆಪಿಸಿಸಿ ಅಧ್ಯಕ್ಷರು, ಜಿಲ್ಲಾಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸೇರಿದಂತೆ ವಿಧಾನಸಭೆ ಚುನಾವಣೆ ಪರಾಜಿತ ಅಭ್ಯರ್ಥಿಗಳಿಗೂ ಸಹ ಭೋಜನಕೂಟಕ್ಕೆ ಆಹ್ವಾನ ನೀಡಲಾಗಿದೆ.
إرسال تعليق