ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹುಟ್ಟುಹಬ್ಬಕ್ಕೆ ವಿಶ್ ಮಾಡಲು ಪೋನ್ ನಂಬರ್ ಶೇರ್ ಮಾಡಿದ ರಮೇಶ್ ಅರವಿಂದ್

ಹುಟ್ಟುಹಬ್ಬಕ್ಕೆ ವಿಶ್ ಮಾಡಲು ಪೋನ್ ನಂಬರ್ ಶೇರ್ ಮಾಡಿದ ರಮೇಶ್ ಅರವಿಂದ್

 


ಬೆಂಗಳೂರು:  ರಮೇಶ್ ಅರವಿಂದ್ ಅವರು ಹುಟ್ಟುಹಬ್ಬಕ್ಕೆ ವಿಶ್ ಮಾಡಿ ಎಂದು ಫೋನ್ ನಂಬರ್ ಶೇರ್ ಮಾಡಿದ್ದಾರೆ.

ನಟ, ನಿರ್ದೇಶಕ, ನಿರೂಪಕ ರಮೇಶ್​ ಅರವಿಂದ್​ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಇದ್ದಾರೆ.

ಕನ್ನಡದ ಚಿತ್ರರಂಗದಲ್ಲಿ ಅವರು ಎವರ್​ಗ್ರೀನ್ ಹೀರೋ ಆಗಿ ಮಿಂಚುತ್ತಿದ್ದಾರೆ. ಸೆಪ್ಟೆಂಬರ್​ 10ರಂದು ರಮೇಶ್​ ಅರವಿಂದ್​ ಅವರ ಜನ್ಮದಿನ. ಈ ವಿಶೇಷ ದಿನದಂದು ಅವರಿಗೆ ಶುಭಾಶಯ ತಿಳಿಸಬೇಕು ಎಂಬುದು ಅಭಿಮಾನಿಗಳ ಆಸೆ.

ಆದರೆ ನೇರವಾಗಿ ವಿಶ್​ ಮಾಡುವುದು ಕಷ್ಟ. ಅದಕ್ಕಾಗಿ ಸ್ವತಃ ರಮೇಶ್​ ಅರವಿಂದ್​ ಕಡೆಯಿಂದ ಒಂದು ದೊಡ್ಡ ಆಫರ್​ ನೀಡಲಾಗಿದೆ.


ಅಭಿಮಾನಿಗಳಿಗಾಗಿ ರಮೇಶ್ ಅರವಿಂದ್ ಫೋನ್​ ನಂಬರ್ ನೀಡಿದ್ದಾರೆ. ಆ ನಂಬರ್​ಗೆ ವಾಟ್ಸಾಪ್​ ಸಂದೇಶ ಕಳಿಸುವ ಮೂಲಕ ನೆಚ್ಚಿನ ನಟನಿಗೆ ನೀವು ವಿಶ್​ ಮಾಡಬಹುದು.

ರಮೇಶ್ ಅರವಿಂದ್ ಸದ್ಯ ಮೋಟಿವೇಶನ್ ವಿಡಿಯೋ ಮೂಲಕ ಯುವಕರನ್ನು ಸೆಳೆಯುತ್ತಿದ್ದಾರೆ. ಅನೇಕ ಶಾಲೆ ಮತ್ತು ಕಾಲೇಜುಗಳಲ್ಲಿ ಮೋಟಿವೇಶನ್ ಸ್ಪೀಚ್ ನೀಡಿದ್ದಾರೆ. ಅಪಾರ ಸಂಖ್ಯೆಯ ಯುವ ಅಭಿಮಾನಿಗಳನ್ನು ಹೊಂದಿದ್ದಾರೆ.

ಸದ್ಯ ಅವರಿಗೆ ಶುಭಹಾರೈಸಲು ಅಭಿಮಾನಿಗಳಿಗೆ ಬಂಪರ್ ಆಫರ್ ನೀಡಿದ್ದಾರೆ. ನೇರವಾಗಿ ರಮೇಶ್ ಅರವಿಂದ್ ಅವರಿಗೆ ಫೋನ್ ಮಾಡಿ ವಿಶ್ ಮಾಡಬಹುದು.

8951599009 ಮತ್ತು 8951699009 ಮೊಬೈಲ್​ ಸಂಖ್ಯೆಗೆ ವಾಟ್ಸಪ್​ ಸಂದೇಶ ಕಳಿಸುವ ಮೂಲಕ ರಮೇಶ್​ ಅರವಿಂದ್​ ಹುಟ್ಟುಹಬ್ಬಕ್ಕೆ ಶುಭ ಹಾರೈಸಬಹುದು.


ಹೀಗೆ ಮೆಸೇಜ್ ಮಾಡುವಾಗ ನಿಮ್ಮ ಹೆಸರು, ಊರು ಮತ್ತು ಜಿಲ್ಲೆಯನ್ನು ತಪ್ಪದೇ ನಮೂದಿಸಿರಬೇಕು. ಮೆಸೇಜ್​ ಮಾಡಿದ ಪ್ರತಿಯೊಬ್ಬರಿಗೂ ರಮೇಶ್​ ಅರವಿಂದ್​ ಅವರೇ ಸ್ವತಃ ಪ್ರತಿಕ್ರಿಯೆ ನೀಡಲಿದ್ದಾರೆ.

ಎಲ್ಲರಿಗಿಂತ ವಿಭಿನ್ನವಾಗಿ ಶುಭಾಶಯ ತಿಳಿಸಿದವರಿಗೆ ಖುದ್ದಾಗಿ ರಮೇಶ್ ಅರವಿಂದ್ ಕರೆ ಮಾಡಿ ಮಾತನಾಡಲಿದ್ದಾರೆ ಎನ್ನುವುದು ವಿಶೇಷ.


0 Comments

Post a Comment

Post a Comment (0)

Previous Post Next Post