ಪುದು: ಬ್ರಹ್ಮ ಶ್ರೀ ನಾರಾಯಣ ಗುರು ವೇದಿಕೆ
ಬಂಟ್ವಾಳ: ಬ್ರಹ್ಮ ಶ್ರೀ ನಾರಾಯಣ ಗುರು ವೇದಿಕೆ ಪುದು ಇದರ "ಗುರು ಸದನ" ಸಭಾಂಗಣ ಉದ್ಭಾಟನೆ ಹಾಗೂ ಶ್ರೀ ಗುರುಗಳ 168ನನೇ ಜನ್ಮ ಜಯಂತಿ ಆಚರಣೆ, ಭಜನಾ ಕಾರ್ಯಕ್ರಮದೊಂದಿಗೆ ಸೆ.11ರಂದು ಆದಿತ್ಯವಾರ ಪುದು ಗ್ರಾಮದ ಕುಮ್ನೇಲುನಲ್ಲಿ ನಡೆಯಿತು.
ಸೆ.10ರಂದು ಗಣೇಶ್ ಭಟ್ ಪೌರೋಹಿತ್ಯದಲ್ಲಿ ಗಣಹೋಮ ನಡೆದು ಸೆ.11 ರಂದು ಆದಿತ್ಯವಾರ ಬೆಳಿಗ್ಗೆ ಸ್ಥಳೀಯ ಹಿರಿಯ ಮಹಿಳೆಯರಿಂದ ಭಜನಾ ಕಾರ್ಯಕ್ರಮ ಉದ್ಭಾಟಿಸಲಾಯಿತು. ದೇವಕೀಕೃಷ್ಣ ಭಜನಾ ತಂಡ ಕುಮ್ಡೇಲು, ಶ್ರೀ ವೀರ ಹನುಮಾನ್ ಮಂದಿರ ಸುಜೀರು ದತ್ತನಗರ ಭಜನಾ ತಂಡಗಳು ಸಹಕರಿಸಿದರು.
ಸಂಘದ ಅಧ್ಯಕ್ಷ ಬಾಬು ಪೂಜಾರಿ ಸುಜೀರು ಕೊಡಂಗೆ ಅಧ್ಯಕ್ಷತೆಯಲ್ಲಿ ನಡೆದ ಸಭಾಂಗಣ ಉದ್ಭಾಟನಾ ಸಮಾರಂಭದಲ್ಲಿ ಸುಜೀರು ಅರಸು ವೈದ್ಯನಾಥ ದೈವಗಳ ಪಾತ್ರಿ ಮುಂಡ ಯಾನೆ ಮೋನಪ್ಪ ಪೂಜಾರಿ, ನಾಗೇಶ್ ಕೋಟ್ಯಾನ್ ಮುಂಬಯಿ, ಕುಂಪಣಮಜಲು, ಜಗದೀಶ್ ಪೂಜಾರಿ ಬೊಳ್ಳನೆ, ವಿಶ್ವನಾಥ ಪೂಜಾರಿ ಕಬೇಲ, ಈಶ್ವರ ಪೂಜಾರಿ ಕಲಾಯಿ, ಭಾಸ್ಕರ ಪೂಜಾರಿ ಕಜಿಪಿತ್ಸ್. ನಾರಾಯಣಗುರು ಯುವ ವೇದಿಕೆ ಮಂಗಳೂರು ಇದರ ಅಧ್ಯಕ್ಷರಾದ ಸುದರ್ಶನ್ ಸುವರ್ಣ, ಸತೀಶ್ ಪೂಜಾರಿ ಸುಜೀರು, ಸಭಾಂಗಣಕ್ಕೆ ಸ್ಥಳಾವಕಾಶ ನೀಡಿದ ದಿ.ಮೋನಪ್ಪ ಅಮೀನ್ ಮಾರಿಪಳ್ಳ ಇವರ ಧರ್ಮಪತ್ನಿ ಶ್ರೀಮತಿ ವಿಮಲ, ಮಕ್ಕಳಾದ ನವೀನ್ ಕುಮಾರ್, ಉದಯ್ ಕುಮಾರ್, ಸಂತೋಷ್ ಕುಮಾರ್, ಸಂಘದ ಮಾಜಿ ಅಧ್ಯಕ್ಷರುಗಳಾದ ರಾಜೇಶ್ ಕಬೇಲ, ಶಂಕರ್ ಸುವರ್ಣ ಕುಂಪಣಮಜಲು, ಸುರೇಶ್ ಪೂಜಾರಿ ನಡುಬೈಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಸಲಾಯಿತು. ಸ್ಥಳಾವಕಾಶ ನೀಡಿದ ಶ್ರೀಮತಿ ವಿಮಲ ಅಮ್ಮನವರನ್ನು ಸನ್ಮಾನಿಸಿ ಗೌರವಿಸಲಾಯಿತು. ಬೃಜೇಶ್ ಅಂಚನ್ ಸುಜೀರು ಹಾಗೂ ಸಂಘದ ಪ್ರಧಾನ ಕಾರ್ಯದರ್ಶಿ ಕಿಶೋರ್ ಸುಜೀರು ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಗೌರವಾಧ್ಯಕ್ಷರಾದ ನಾಗಪ್ಪ ಪೂಜಾರಿ ಕಬೇಲ, ಕೋಶಾಧಿಕಾರಿ ಅಶೋಕ್ ಹೊಯಿಗೆಗದ್ದೆ ಸಹಕರಿಸಿದರು. ಕಾರ್ಯಕ್ರಮದ ನಂತರ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ಪದ್ಮರಾಜ್ ಆರ್. ಕೋಶಾಧಿಕಾರಿ ಕುದ್ರೋಳಿ, ಉಮೇಶ್ ಸುವರ್ಣ ತುಂಬೆ, ತಾರನಾಥ ಕೊಟ್ಟಾರಿ ತೇವು, ಸಂತೋಷ್ ಗಾಂಭೀರ ಸುಜೀರುಗುತ್ತು, ಚಂದ್ರಶೇಖರ ಗಾಂಭೀರ ಸುಜೀರುಗುತ್ತು, ಮೋಹನ್ ಕುಲಾಲ್ ಸುಜೀರು ದೇವರಪಾಲು, ಪ್ರಕಾಶ್ಚಂದ್ರ ರೈ ದೇವಸ್ಯ, ಅಶೋಕ್ ಕಾವ ದೇವಸ್ಯ,ಮನೋಜ್ ಆಚಾರ್ಯ ನಾಣ್ಯ,ವಿಠ್ಠಲ್ ಸಾಲ್ಯಾನ್ ಕುಮ್ನೇಲು, ರವೀಂದ್ರ ಕಂಬಳಿ ಸುಜೀರುಬೀಡು, ಗಣೇಶ್ ಸುವರ್ಣ ತುಂಬೆ, ಪದ್ಮನಾಭ ಶೆಟ್ಟಿ ಪುಂಚಮೆ, ಪ್ರ ತಾಪ್ ಆಳ್ವ ಸುಜೀರುಗುತ್ತು, ಸುರೇಂದ್ರ ಕಂಬಳಿ ಸುಜೀರು ಬೀಡು, ಗಣೇಶ್ ದತ್ತನಗರ, ನವೀನ್ ಕುಮಾರ್ (ಸುರಭಿ) ಕೊಡ್ಮಾಣ್, ಜಗದೀಶ್ ಕಡೆಗೋಳಿ, ಜಯಾನಂದ ಕಡೆಗೋಳಿ, ಸುರೇಶ್ ಕಡೆಗೋಳಿ, ಹಾಗೂ ಬಿಲ್ಲವ ಸಮಾಜದ ಹಿರಿಯರು ಮತ್ತಿತರರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
Post a Comment