ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹಿಂದೂಪರ ಸಂಘಟನೆಗಳು ಮದರಸಾ ನಿಷೇಧಕ್ಕೆ ಮನವಿ

ಹಿಂದೂಪರ ಸಂಘಟನೆಗಳು ಮದರಸಾ ನಿಷೇಧಕ್ಕೆ ಮನವಿ

 


ಬೆಂಗಳೂರು :  ರಾಜ್ಯದಲ್ಲೂ ಮದರಸಾ ನಿಷೇಧಿಸುವಂತೆ ವಿವಿಧ ಹಿಂದೂಪರ ಸಂಘಟನೆಗಳು ಶಿಕ್ಷಣ ಇಲಾಖೆಗೆ ಮನವಿ ಮಾಡಿವೆ.


ಮದರಸಗಳು ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿವೆ. ಹೀಗಾಗಿ ಅಸ್ಸಾಂ ಹಾಗೂ ಪಶ್ಚಿಮ ಬಂಗಾಳ ಸರ್ಕಾರ ನಿಷೇಧ ಮಾಡಿದಂತೆ ಕರ್ನಾಟಕದಲ್ಲೂ ಮದರಸಗಳನ್ನು ಬ್ಯಾನ್ ಮಾಡಿ ಅಲ್ಲಿ ಓದುತ್ತಿರುವ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತೆ ಮಾಡಬೇಕು ಎಂದು ಶಿಕ್ಷಣ ಇಲಾಖೆಗೆ ಮನವಿ ಮಾಡಲಾಗಿದೆ.


ಮದರಸಾ ಶಿಕ್ಷಕರಿಗೆ ಯಾವುದೇ ಪಾಠ ಬೋಧನೆಗೆ ಅರ್ಹತೆ ಇರುವುದಿಲ್ಲ. ಮಕ್ಕಳಿಗೆ ಗಣಿತ ಇತಿಹಾಸ ಭಾಷೆಗಳ ಪರಿಚಯವೇ ಮದರಸಾಗಳಲ್ಲಿ ಮಾಡುವುದಿಲ್ಲ. 


ಹೀಗಾಗಿ ಉಗ್ರ ಸಂಘಟನೆಗಳ ಜೊತೆ ಸಂಪರ್ಕ ಹೊಂದಿರುವ ಮದರಸಾಗಳನ್ನು ರಾಜ್ಯದಲ್ಲಿ ನಿಷೇಧಿಸುವಂತೆ ಹಿಂದೂಪರ ಸಂಘಟನೆಗಳು ಒತ್ತಾಯಿಸಿವೆ.


0 Comments

Post a Comment

Post a Comment (0)

Previous Post Next Post