ಚಿತ್ರದುರ್ಗ : ಪೋಕ್ಸೋ ಪ್ರಕರಣದಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವ ಮುರುಘಾಮಠದ ಶ್ರೀಗಳ ಪೊಲೀಸ್ ಕಸ್ಟಡಿ ಇಂದು ಕೊನೆಗೊಳ್ಳಲ್ಲಿದ್ದು, ಪೊಲೀಸರು ಇಂದು ಶ್ರೀಗಳನ್ನು ಕೋರ್ಟ್ ಗೆ ಹಾಜರುಪಡಿಸಲಿದ್ದಾರೆ.
ಮುರುಘಾ ಶರಣರ ಪೊಲೀಸ್ ಕಸ್ಟಡಿ ಇಂದು ಬೆಳಗ್ಗೆ 11 ಗಂಟೆಗೆ ಅಂತ್ಯವಾಗಲಿದ್ದು, ತನಿಖಾಧಿಕಾರಿಗಳು ಶರಣರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆಗೆ ಮತ್ತೊಂದಿಷ್ಟು ಕಾಲಾವಕಾಶ ಬೇಕು ಅನಿಸಿದರೆ ಮತ್ತೆ ವಶಕ್ಕೆ ಪಡೆಯಲಿದ್ದಾರೆ. ಮುರುಘಾಶ್ರೀಗಳ ನಿರೀಕ್ಷಣಾ ಜಾಮೀನು ವಜಾ ಆಗಿರುವುದರಿಂದ ಸೋಮವಾರ ಮಠದ ವಕೀಲರು ರೆಗ್ಯೂಲರ್ ಬೇಲ್ ಗಾಗಿ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಲಿದ್ದಾರೆ.
ಇನ್ನು ಮುರುಘಾ ಶ್ರೀಗಳನ್ನು ಭಾನುವಾರ ಅಧಿಕಾರಿಗಳು ಮುರುಘಾ ಮಠಕ್ಕೆ ಕರೆದೊಯ್ದು ಸ್ಥಳ ಮಹಜರು ನಡೆಸಿದ್ದಾರೆ. ಬೆಳಗ್ಗೆ 11.45 ರಿಂದ ಮಧ್ಯಾಹ್ನ 2.30 ರವರೆಗೆ ಮಠದಲ್ಲಿ ಮಹಜರು ನಡೆಯಿತು. ಮಠದಿಂದ ಮಹಜರು ಮುಗಿಸಿಕೊಂಡ ಹೋದ ಶ್ರಿಗಳು ಡಿವೈಎಸ್ ಪಿ ಕಚೇರಿಯಲ್ಲಿ ಕೆಲಕಾಲ ವಿಶ್ರಾಂತಿ ಪಡೆದಿದ್ದಾರೆ. ನಂತರ ಮತ್ತೆ ವಿಚಾರಣೆಗೆ ಹಾಜರಾಗಿದ್ದಾರೆ.
Post a Comment