ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪಕೋಡ ಎಂದು ಮಗುವಿಗೆ ಹೆಸರಿಟ್ಟ ಯುಕೆ ದಂಪತಿಗಳು

ಪಕೋಡ ಎಂದು ಮಗುವಿಗೆ ಹೆಸರಿಟ್ಟ ಯುಕೆ ದಂಪತಿಗಳು

 


ಯುಕೆ : ತಮ್ಮ ಮಗುವಿಗೆ ದಂಪತಿಗಳು ಭಾರತೀಯ ಖಾದ್ಯಗಳಲ್ಲಿ ಒಂದಾದ ಪಕೋಡ ಎಂಬ ಹೆಸರಿಟ್ಟು ಅಚ್ಚರಿ ಮೂಡಿಸಿದ್ದಾರೆ. ಇಂಥದೊಂದು ಘಟನೆ ಯುಕೆಯಲ್ಲಿ ನಡೆದಿದೆ.


ಐರ್ಲೆಂಡ್ ನ ಪ್ರಖ್ಯಾತ ರೆಸ್ಟೋರೆಂಟ್ ನ್ಯೂ ಟೌನ್ ಅಬ್ಬೆ ಈ ವಿಚಾರವನ್ನು ಸೋಷಿಯಲ್‌ ಮಿಡಿಯಾ ದಲ್ಲಿ ಹಂಚಿಕೊಂಡಿದ್ದು, ಈ ರೆಸ್ಟೋರೆಂಟ್ ಗೆ ನಿತ್ಯವೂ ಭೇಟಿ ನೀಡುತ್ತಿದ್ದ ದಂಪತಿ ಅಲ್ಲಿನ ನೆಚ್ಚಿನ ಖಾದ್ಯ ಪಕೋಡ ಹೆಸರನ್ನೇ ತಮ್ಮ ಮಗುವಿಗೆ ಇಟ್ಟಿದ್ದಾರೆ. ಇವರು ಭೇಟಿ ನೀಡಿದಾಗೆಲ್ಲ ಪಕೋಡ ಹೆಸರಿನಿಂದ ಕರೆಯಲಾಗುವ ಖಾದ್ಯಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದರಂತೆ.


ಮಳೆಗಾಲದ ವೇಳೆ ನಾವುಗಳು ಕಾಫಿ ಜೊತೆಗೆ ಪಕೋಡ ಸವಿಯುತ್ತಿದ್ದರೆ, ಪಕೋಡ ಪ್ರಿಯ ಈ ದಂಪತಿ ತಮ್ಮ ಮಗುವಿಗೆ ಆ ಹೆಸರನ್ನೇ ಇಡುವ ಮೂಲಕ ಎಲ್ಲರನ್ನು ಬೆರಗಾಗಿಸಿದ್ದಾರೆ. ರೆಸ್ಟೋರೆಂಟ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬಿಲ್ ಒಂದನ್ನು ಹಂಚಿಕೊಂಡಿದ್ದು, ಇದರಲ್ಲಿ ಚಿಕನ್ ಪಕೋಡ ಸೇರಿದಂತೆ ಹಲವು ಖಾದ್ಯಗಳ ಹೆಸರಿದೆ.


ಈ ಬಗ್ಗೆ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿರುವ ಕೆಲವರು ತಮಾಷೆ ಮಾಡಿದ್ದಾರೆ. ಒಬ್ಬರಂತೂ ತಾನು ಗರ್ಭಿಣಿಯಾದ ವೇಳೆ ಬಾಳೆಹಣ್ಣು ಹಾಗೂ ಕಲ್ಲಂಗಡಿ ಇಷ್ಟಪಡುತ್ತಿದ್ದೆ. ಆದರೆ ಸದ್ಯ ನಾನು ನನ್ನ ಮಗುವಿಗೆ ಆ ಹೆಸರನ್ನು ಇಡಲಿಲ್ಲ ಎಂದು ಹೇಳಿದ್ದಾರೆ.


0 Comments

Post a Comment

Post a Comment (0)

Previous Post Next Post