ಬೆಂಗಳೂರು: ವಿದ್ಯುತ್ ನಿಗಮದಲ್ಲಿ ಐಟಿಐ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುತ್ತದೆ ಎಂದು ಇಂಧನ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಶಾಸಕ ಬೂಸನೂರು ರಮೇಶ್ ಬಾಳಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, 2015ರ ಪೂರ್ವದಲ್ಲಿ ಕೆಪಿಸಿಎಲ್ ಮತ್ತು ಹೆಸ್ಕಾಂಗಳಲ್ಲಿ 9281 ಹುದ್ದೆಗಳನ್ನು ಐಟಿಐ ವಿದ್ಯಾರ್ಹತೆ ಆಧಾರದಲ್ಲೇ ನೇಮಕ ಮಾಡಲಾಗಿದೆ.
ಶೇ.50ರಷ್ಟು ಹುದ್ದೆಗಳನ್ನು ಐಟಿಐ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಂದ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಸದ್ಯಕ್ಕೆ ಈ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
إرسال تعليق