ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪಿಎಫ್ಐ ನಿಷೇಧ: ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದ ಕೇಂದ್ರ ಸರ್ಕಾರ

ಪಿಎಫ್ಐ ನಿಷೇಧ: ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದ ಕೇಂದ್ರ ಸರ್ಕಾರ


ಕ್ಷಿಪ್ರ ದಾಳಿ ನಡೆಸಿದ ಕೆಲವೇದಿನಗಳಲ್ಲಿ ಬಹು ಆತಂಕಕಾರಿ ಸಂಘಟನೆ ಎಂದೇ ಪರಿಗಣಿಸಲಾದ ಪಿ.ಎಫ್ ಐ ಯನ್ನು ರಾಷ್ಟ್ರ ವ್ಯಾಪಿಯಾಗಿ 5 ವರುಷಗಳ ಕಾಲ ನಿಷೇಧ ಹೇರಿ ಕೇಂದ್ರ ಸರ್ಕಾರ ತೆಗೆದುಕೊಂಡಿರುವುದು ಉತ್ತಮ ನಿರ್ಧಾರ ಅನ್ನುವುದರಲ್ಲಿ ಎರಡು ಮಾತಿಲ್ಲ. ಆದರೂ ನಿರ್ಧಾರ ಪ್ರತ್ಯಕ್ಷ ಹಾಗೂ ಪರೇೂಕ್ಷವಾಗಿ ರಾಜಕೀಯ ಲೆಕ್ಕಾಚಾರದ ದೃಷ್ಟಿಯಿಂದ ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆದು ಉರುಳಿಸಿದೆ ಕೇಂದ್ರ  ಸರಕಾರ ಅನ್ನುವುದು ಅಷ್ಟೇ ಸತ್ಯ.


ಒಂದು ದೇಶದ ಭದ್ರತೆ ಸುರಕ್ಷತೆಯ ದೃಷ್ಟಿಯಿಂದ ಪಿ.ಎಫ್ ಐ. ನಿಷೇಧವಾದರೆ ರಾಜಕೀಯಾಗಿ ಬಿಜೆಪಿಗೆ ಇನ್ನಷ್ಟು ಲಾಭ ತರುವ ನಿರ್ಧಾರ ಅನ್ನುವುದು ಇನ್ನೊಂದು ಸೂಕ್ಷ್ಮ ಲೆಕ್ಕಾಚಾರ. ಮೂಲತ: ಪಿ.ಎಫ್ ಐ. ರಾಜಕೀಯ ಪಕ್ಷ ಅಲ್ಲ.. ಆದರೆ ಅವರ ಮುಖ್ಯ ಉದ್ದೇಶವೇ ಎಸ್‌ಡಿಪಿಐಯನ್ನು ರಾಜಕೀಯ ಶಕ್ತಿಯನ್ನಾಗಿ ಬೆಳೆಸಿ ಹಂತ ಹಂತವಾಗಿ ಅಧಿಕಾರ ಹಿಡಿಯ ಬೇಕು ಅನ್ನುವುದು ಹಿಡನ್ ಅಜೆಂಡವಾಗಿತ್ತು. ಈ ಪಕ್ಷಕ್ಕೆ ಮುಸ್ಲಿಂ ಮತಗಳೇ ಜೀವಾಳವಾಗಿತ್ತು ಅನ್ನುವುದು ಅಷ್ಟೇ ಸತ್ಯ. ಆದುದರಿಂದ ಬಿಜೆಪಿಯೇತರ ಪಕ್ಷಗಳಿಗೆ ತಮ್ಮ ಮತಗಳಿಗೆ ಲಗ್ಗೆ ಹಾಕುವ ಈ ಪಿಎಫ್ಐ‌ ನಿಷೇಧಕ್ಕಿಂತ ಎಸ್‌ಡಿಪಿಐ ನಿಷೇಧವೇ ಬೇಕಾಗಿತ್ತು. ಹಾಗಾಗಿ ಬಿಜೆಪಿಯೇತರ ಪಕ್ಷಗಳೂ ಬಿಜೆಪಿಯವರಿಗೆ ತಾಖತ್ತು ಇದ್ದರೆ ಎಸ್‌ಡಿಪಿಐ  ನಿಷೇಧ ಮಾಡಿ ಅನ್ನುವ ಸವಾಲು ಪದೆ ಪದೆ ಹಾಕುತ್ತಾ ಬಂದಿರುವುದು. ಆದರೆ ಬಿಜೆಪಿ ಮಾತ್ರ ರಾಜಕೀಯದ ಜಾಣತನದ ಲೆಕ್ಕಾಚಾರ ಹಾಕಿ ಎಸ್‌ಡಿಪಿಐ ಉಳಿಸಿಕೊಂಡು ಅದರ ಮಾತೃ ಸಂಘಟನೆಯನ್ನು ನಿಷೇಧ ಮಾಡಿ ನಿಧಾ೯ರ ತೆಗೆದುಕೊಂಡಿರುವುದು ರಾಜಕೀಯ ಜಾಣತನದ ನಡೆ ಎಂದೇ ಪರಿಗಣಿಸಲಾಗಿದೆ.


ಮುಸ್ಲಿಂ ಮತಗಳು ಇನ್ನಷ್ಟು ಎಸ್ ಡಿಪಿಐ ಕಡೆಗೆ ಕ್ರೇೂಡೀಕೃತವಾಗುವ ಎಲ್ಲಾ ಲಕ್ಷಣಗಳು ಸ್ವಷ್ಟವಾಗಿ ಗೇೂಚರಿಸುತ್ತಿವೆ ಇದರಿಂದಾಗಿ ಬಿಜೆಪಿಯೇತರ ಪಕ್ಷಗಳಿಗೆ ಮುಂದಿನ ಚುನಾವಣೆಯಲ್ಲಿ ಬಲವಾದ ಹೊಡೆತ ಬೀಳುವ ಎಲ್ಲಾ ಲಕ್ಷಣಗಳು ಸ್ವಷ್ಟವಾಗಿ ಕಾಣುತ್ತಿದೆ. ಇಂದು ಮುಸ್ಲಿಂ ಸಂಘಗಳಿಗೆ ತಮ್ಮ ಅಸ್ಮಿತೆ ಉಳಿಸಿಕೊಳ್ಳ ಬೇಕಾದ ಅನಿವಾರ್ಯತೆ ಬಂದಿರುವ ಕಾರಣ ತಮ್ಮ ಮತಗಳನ್ನು ಎಸ್‌ಡಿಪಿಐ ಕಡೆಗೆ ದಾಖಲಿಸ ಬೇಕಾದ ಅನಿವಾರ್ಯತೆಯ ಪರಿಸ್ಥಿತಿ ಬಂದಿರುವುದಂತೂ ನಿಜ.


ಹಾಗಾಗಿ ಪಿಎಫ್‌ಐ ನಿಷೇಧದ ಕುರಿತಾಗಿ ಬಿಜೆಪಿಯೇತರ ಪಕ್ಷಗಳ ಹೇಳಿಕೆ ಹೇಗಿರುತ್ತದೆ ಅನ್ನುವುದನ್ನು ಕುತೂಹಲದಿಂದ ಕಾದುನೇೂಡಿ..

- ಪ್ರೊ. ಕೊಕ್ಕಣೆ೯ ಸುರೇಂದ್ರ ನಾಥ ಶೆಟ್ಟಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 تعليقات

إرسال تعليق

Post a Comment (0)

أحدث أقدم