ಕಾಸರಗೋಡು: ವಿದ್ಯಾನಗರದ ನ್ಯಾಯಾಲಯ ಸಂಕೀರ್ಣದಲ್ಲಿ ನ್ಯಾಯಾಂಗ ಅಧಿಕಾರಿಗಳು, ವಕೀಲರು, ಗುಮಾಸ್ತರು ಮತ್ತು ನ್ಯಾಯಾಲಯದ ನೌಕರರ ಸಂಯುಕ್ತ ಆಶ್ರಯದಲ್ಲಿ ಓಣಂ ಆಚರಣೆ ನಡೆಯಿತು. ಕಾರ್ಯಕ್ರಮವನ್ನು ಜಿಲ್ಲಾ ನ್ಯಾಯಾಧೀಶರಾದ ಶ್ರೀ ಸಿ.ಕೃಷ್ಣ ಕುಮಾರ್ ಉದ್ಘಾಟಿಸಿದರು. ವಕೀಲರ ಸಂಘದ ಅಧ್ಯಕ್ಷ ಶ್ರೀ ಎಂ.ನಾರಾಯಣ ಭಟ್ ಮುಖ್ಯ ಅತಿಥಿಗಳಾಗಿದ್ದರು.
ಪೂಕಳಂ, ಮಾವೇಲಿ, ಮಹಿಳಾ ವಕೀಲರು ಮತ್ತು ನ್ಯಾಯಾಲಯದ ಮಹಿಳಾ ಉದ್ಯೋಗಿಗಳು ಮೆಗಾ ತಿರುವಾತಿರ, ಓಣಪಾಟ್, ವಕೀಲರ ಸಂಘವು ಸುಮಾರು 700 ಮಂದಿಗೆ ಓಣಂ ಔತಣ ಏರ್ಪಡಿಸಿದ್ದರು. ಸಂಗೀತ ಕುರ್ಚಿ, ಮಡಿಕೆ ಒಡೆದ, ಹಗ್ಗಜಗ್ಗಾಟ ಮೊದಲಾದ ಸ್ಪರ್ಧೆಗಳು ನಡೆದವು.
ಅಂತಿಮವಾಗಿ ಜಿಲ್ಲಾ ನ್ಯಾಯಾಧೀಶರು ಸಿ.ಕೃಷ್ಣಕುಮಾರ್ ನೇತೃತ್ವದಲ್ಲಿ ನ್ಯಾಯಾಂಗ ಅಧಿಕಾರಿಗಳು ಹಾಗೂ ವಕೀಲರ ಸಂಘದ ಕಾರ್ಯದರ್ಶಿ ಪ್ರದೀಪ್ ರಾವ್ ಮೇಪೋಡು ನೇತೃತ್ವದಲ್ಲಿ ಹಿರಿಯ ವಕೀಲರ ನಡುವೆ ಸೌಹಾರ್ದ ಹಗ್ಗ ಜಗ್ಗಾಟದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ನ್ಯಾಯಾಲಯದ ಕಲಾಪಕ್ಕೆ ಯಾವುದೇ ತೊಂದರೆಯಾಗದಂತೆ ಕಾರ್ಯಕ್ರಮ ನಡೆಸಿರುವುದು ಗಮನಾರ್ಹ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
إرسال تعليق