ಧರ್ಮತ್ತಡ್ಕ: ಕೇರಳದ ಸಾಂಸ್ಕೃತಿಕ ಹಬ್ಬ ಓಣಂನ್ನು ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರೀ ಹೈಯರ್ ಸೆಕೆಂಡರಿ ಶಾಲೆಯ, ಪ್ರೌಢ ಶಾಲಾ ವಿಭಾಗದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಇದೇ ಸಂದರ್ಭ ಹೂವಿನ ರಂಗೋಲಿ (ಪೂಕಳಂ) ಹಾಗೂ ವಿವಿಧ ಸ್ಪರ್ಧೆಗಳನ್ನು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿತ್ತು.
ಸ್ಥಳೀಯವಾಗಿ ಲಭಿಸಿದ ಹೂವುಗಳನ್ನು ಬಳಸಿ ವಿದ್ಯಾರ್ಥಿಗಳು ಹೂ-ರಂಗೋಲಿಯನ್ನು ರಚಿಸಿದರು.
ಬಳಿಕ ಜರಗಿದ ಸಂಗೀತ ಕುರ್ಚಿ, ಹಗ್ಗ ಜಗ್ಗಾಟ ಹಾಗೂ ಮೊಸರು ಕುಡಿಕೆ ಒಡೆಯುವುದು ಇತ್ಯಾದಿ ಸ್ಪರ್ಧೆಗಳಲ್ಲಿ ಅನೇಕ ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿ ತಂಡದಲ್ಲೂ, ವೈಯಕ್ತಿಕ ನೆಲೆಯಲ್ಲೂ ಬಹುಮಾನವನ್ನು ಪಡೆದರು. ಇದೇ ಸಂದರ್ಭ ಓಣಂ ಔತಣವನ್ನು ಏರ್ಪಡಿಸಲಾಗಿತ್ತು.
ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ವ್ಯವಸ್ಥಾಪಕ ಶ್ರೀ ಎನ್ ಶಂಕರನಾರಯಣ ಭಟ್, ಮುಖ್ಯೋಪಾಧ್ಯಾಯ ಶ್ರೀ ಇ ಎಚ್ ಗೋವಿಂದ ಭಟ್ ಬಹುಮಾನ ವಿತರಿಸಿದರು. ಸರ್ವ ಅಧ್ಯಾಪಕ, ಸಿಬ್ಬಂದಿ ವರ್ಗದವರ ಸಹಕಾರದಿಂದ ಕಾರ್ಯಕ್ರಮವು ಸಂಪನ್ನಗೊಂಡಿತು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
Post a Comment