ರಿಯಾದ್: ಸೌದಿ ದೊರೆ ಸಲ್ಮಾನ್ ಅವರು ತಮ್ಮ ಪುತ್ರ, ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರನ್ನು ದೇಶದ ನೂತನ ಪ್ರಧಾನ ಮಂತ್ರಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಮಂಗಳವಾರ ಸಂಪುಟ ಪುನಾರಚನೆ ಮಾಡಿರುವ ಸೌದಿ ದೊರೆ ಸಲ್ಮಾನ್, ತನ್ನ ಇನ್ನೊಬ್ಬ ಪುತ್ರನಾದ ಖಾಲಿದ್ ಬಿನ್ ಸಲ್ಮಾನ್ ಅವರನ್ನು ನೂತನ ರಕ್ಷಣಾ ಸಚಿವರಾಗಿ ನೇಮಕ ಮಾಡಿದ್ದಾರೆ.
ಇನ್ನು ಸಂಪುಟದ ಉಸ್ತುವಾರಿ ನೂತನ ಪ್ರಧಾನಿ ಮೊಹಮ್ಮದ್ ಬಿನ್ ಸಲ್ಮಾನ್ ಅವರದ್ದಾಗಲಿದೆ.
إرسال تعليق