ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಂಗಳೂರು; ಶ್ವಾನ ದಳದ ನಾಯಿ ಗೀತಾ ಇನ್ನಿಲ್ಲ

ಮಂಗಳೂರು; ಶ್ವಾನ ದಳದ ನಾಯಿ ಗೀತಾ ಇನ್ನಿಲ್ಲ

 


ಮಂಗಳೂರು: ನಗರದ ಪೊಲೀಸ್‌ ಶ್ವಾನ ದಳದ ನಾಯಿ ಗೀತಾ ಶನಿವಾರ ಮೃತಪಟ್ಟಿದೆ. ಸ್ಫೋಟಕ ವಸ್ತುಗಳನ್ನು ಪತ್ತೆ ಹಚ್ಚಲು ನೆರವಾಗುತ್ತಿದ್ದ ಲ್ಯಾಬ್ರಡಾರ್‌ ರಿಟ್ರೀವರ್‌ ತಳಿಯ ಈ ನಾಯಿಗೆ 11 ವರ್ಷ ಎರಡು ತಿಂಗಳು ವಯಸ್ಸಾಗಿತ್ತು.


2011ರ ಆ.19ರಂದು ಪೊಲೀಸ್‌ ಶ್ವಾನದಳಕ್ಕೆ ಸೇರ್ಪಡೆಯಾಗಿದ್ದ ಗೀತಾ ಬೆಂಗಳೂರಿನ ಆಡುಗೋಡಿಯಲ್ಲಿ 11 ತಿಂಗಳು ತರಬೇತಿ ಪಡೆದಿತ್ತು. ನಗರಕ್ಕೆ ಗಣ್ಯರ ಭೇಟಿ ಸಂದರ್ಭಗಳಲ್ಲಿ ಹಾಗೂ ಬಂದೋಬಸ್ತ್‌ ವೇಳೆ ಸ್ಥಳ ತಪಾಸಣೆಗೆ ನೆರವಾಗುತ್ತಿತ್ತು. ಹೆಡ್‌ಕಾನ್‌ಸ್ಟೆಬಲ್‌ ಹರೀಶ್‌ ಎ. ಅವರು ಈ ನಾಯಿಯ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದರು.


'ಗೀತಾ ಅಂತ್ಯಕ್ರಿಯೆಯು ನಗರದಲ್ಲಿರುವ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಮೈದಾನದಲ್ಲಿ ಭಾನುವಾರ ನಡೆಯಲಿದೆ' ಎಂದು ನಗರ ಪೊಲೀಸ್‌ ಕಮಿಷನರ್‌ ಎನ್‌.ಶಶಿಕುಮಾರ್‌ ತಿಳಿಸಿದರು.



0 تعليقات

إرسال تعليق

Post a Comment (0)

أحدث أقدم