ಪುತ್ತೂರು: ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಮುಳ್ಳೇರಿಯಾ ಮಂಡಲ ಸಭೆಯು ದಿನಾಂಕ 28.08.2022 ಆದಿತ್ಯವಾರದಂದು ಈಶ್ವರಮಂಗಲ ಜನಮಂಗಳ ಸಭಾಭವನದಲ್ಲಿ ಜರಗಿತು.
ಈಶ್ವರಮಂಗಲ ವಲಯದ ಅಧ್ಯಕ್ಷರಾದ ಶ್ರೀ ಸುಬ್ರಹ್ಮಣ್ಯ ಭಟ್ ಗಬ್ಬಲಡ್ಕ ಧ್ವಜಾರೋಹಣಗೈದರು. ಗುರುವಂದನೆ, ಗೋವಂದನೆಯೊಂದಿಗೆ ಸಭೆ ಪ್ರಾರಂಭವಾಯಿತು. ಸ್ವಾಗತ, ಪ್ರಾಸ್ತಾವಿಕ ಅನಂತರ ಶ್ರೀರಾಮ ಭುಜಂಗ ಪ್ರಯಾತ ಸ್ತೋತ್ರ ಸಾಮೂಹಿಕ ಪಠಣ ನಡೆಯಿತು.
ಮಂಡಲ ಕಾರ್ಯದರ್ಶಿಗಳು ಗತ ಸಭೆಯ ವರದಿಯನ್ನು ಸಭೆಯ ಮುಂದಿಟ್ಟರು. ಮಂಡಲ ಕೋಶಾಧ್ಯಕ್ಷರು ಜುಲೈ ತಿಂಗಳ ಲೆಕ್ಕಪತ್ರವನ್ನು ಸಭೆಯ ಮುಂದಿಟ್ಟು ಅನುಮೋದನೆ ಪಡೆದರು. ವಲಯ ಪದಾಧಿಕಾರಿಗಳು ತಮ್ಮ ತಮ್ಮ ವಲಯದ ಕಾರ್ಯಚಟುವಟಿಕೆಗಳ ವರದಿಯನ್ನು ಮಂಡಿಸಿದರು. ವಿವಿಧ ವಿಭಾಗ ವರದಿ ಮಂಡಿಸಲಾಯಿತು.
ಕುಂಬಳೆ ವಲಯದ ಶ್ರೀ ಗಣರಾಜ ಭಟ್ಟರಿಗೆ ಶ್ರೀಮಠದಿಂದ ನೀಡಲಾದ ಸಹಾಯಧನವನ್ನು ಹಸ್ತಾಂತರಿಸಲಾಗಿದೆ. ಈಶ್ವರ ಮಂಗಲ ವಲಯದ ಶ್ರೀ ಶ್ರೀಕೃಷ್ಣ ಶಾಸ್ತ್ರಿಯವರ ಮನೆಯನ್ನು ದುರಸ್ತಿ ಮಾಡಿಕೊಡಲಾಗಿದೆ. ಸರ್ವರ ಸಹಕಾರಕ್ಕೆ ಕೃತಜ್ಞತೆಗಳನ್ನು ಸಮರ್ಪಿಸಲಾಯಿತು.
ಶ್ರೀಗುರುಗಳ ಗುರುಕುಲ ಚಾತುರ್ಮಾಸ್ಪದ ಪ್ರಯುಕ್ತ ದಿನಾಂಕ ಸೆಪ್ಟೆಂಬರ್ 5, 7 ಹಾಗೂ 8ರಂದು ಮುಳ್ಳೇರಿಯ ಮಂಡಲದ ವಿವಿಧ ವಲಯಗಳಿಂದ ಭಿಕ್ಷಾಸೇವೆ ನಡೆಯಲಿದ್ದು ಗುಂಪೆ, ಎಣ್ಮಕಜೆ ಹಾಗೂ ಕೊಡಗು ವಲಯಗಳಿಂದ ಶ್ರೀಗುರು ಭಿಕ್ಷಾಂಗ ಪಾದುಕಾ ಪೂಜೆ ಮಾಡುವುದು, ಇತರ ವಲಯಗಳಿಂದ ಪಾದುಕಾ ಪೂಜೆ ಮತ್ತು ಇತರ ಪೂಜೆಗಳನ್ನು ನಡೆಸುವ ಕುರಿತು ತಿಳಿಸಿ ಮಾಹಿತಿಯನ್ನು ತಿಳಿಸಲಾಯಿತು.
ಪೆರಾಜೆ ಮಾಣಿ ಶ್ರೀರಾಮಚಂದ್ರಾಪುರ ಮಠದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಶಿಲಾಮಯ ಗರ್ಭಗುಡಿಯ ವಿಚಾರವನ್ನು ಪ್ರಸ್ತಾವಿಸಲಾಯಿತು. 29,08,2022ರಂದು ನಡೆಯುವ ಬಾಲಾಲಯ ಪ್ರತಿಷ್ಠಾ ಕಾರ್ಯ ಮತ್ತು 09.09.2022ರಂದು ನಡೆಯುವ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಎಲ್ಲರನ್ನೂ ಆಮಂತ್ರಿಸಿ ಎಲ್ಲರ ಸಹಕಾರವನ್ನು ಕೋರಲಾಯಿತು. ಆರಂಭಿಸಿದ ಕೆಲಸ ನಿರ್ವಿಘ್ನವಾಗಿ ಸಾಗುವಂತೆ ಪ್ರಾರ್ಥಿಸಿ ಪ್ರತಿ ಮನೆಯಲ್ಲಿ ಪ್ರತಿದಿನ 108 ಶ್ರೀರಾಮ ತಾರಕ ಮಂತ್ರ ಪಠಣ ಮಾಡುವಂತೆ ತಿಳಿಸಲಾಯಿತು, ತಾ. 01.09.2022ರಂದು ಮತ್ತು 03.09.2022ರಂದು ಕಾರ್ಯಕರ್ತರಿಂದ ಶ್ರಮದಾನ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಲಾಯಿತು.
ಸೇವಾಸೌಧ ಪರಿಪೂರ್ಣತೆಯ ಗುರಿತಲುಪಲು ಸಮರ್ಪಣೆಯ ವಿಚಾರವನ್ನು ತಿಳಿಸಲಾಯಿತು.
ಗುರುಕುಲ ನಿರ್ವಹಣೆ ವಿಚಾರವ, ಅಂಗಸಂಸ್ಥೆಗಳ ವತಿಯಿಂದ ಪಾದುಕಾ ಪೂಜೆ ಮಾಹಿತಿಯನ್ನು ನೀಡಲಾಯಿತು.
15.08.2022ರಂದು ಮಂಡಲ ಪದಾಧಿಕಾರಿಗಳು ಮತ್ತು ಸುಳ್ಯ ವಲಯ ಪದಾಧಿಕಾರಿಗಳು ಮಂಡಲದ ನಿಕಟಪೂರ್ವ ಅಧ್ಯಕ್ಷರಾದ ಪ್ರೊ. ಶ್ರೀಕೃಷ್ಣ ಭಟ್ಟರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಗೌರವ ಸಲ್ಲಿಸಿ, ಶ್ರೀಗುರುಗಳ ಕೃಪೆಯಿಂದ ಶೀಘ್ರವಾಗಿ ಗುಣಮುಖರಾಗಿ ಶ್ರೀಮಠದ ಸೇವೆಯಲ್ಲಿ ಪಾಲ್ಗೊಳ್ಳುವಂತಾಗಲೆಂದು ಪ್ರಾರ್ಥಿಸಿದ ವಿಚಾರವನ್ನು ತಿಳಿಸಲಾಯಿತು.
ಶ್ರೀಮಠಕ್ಕೆ ನಿಷ್ಠಾವಂತರಾಗಿ ಸೇವೆಸಲ್ಲಿಸಿದ ಸೀಮಾಗುರಿಕ್ಕಾರರೂ ವಲಯ ಕೋಶಾಧ್ಯಕ್ಷರೂ ಜನಮಂಗಲ ಸಭಾಭವನ ಆಡಳಿತ ಸಮಿತಿ ಉಪಾಧ್ಯಕ್ಷರೂ ಆಗಿದ್ದ ಶ್ರೀ ಪೆರ್ನಾಜೆ ರಾಘವೇಂದ್ರ ಭಟ್ಟ ದಂಪತಿಗಳನ್ನು ಮತ್ತು ಸುಮಾರು 15 ವರ್ಷ ಸೇವೆಸಲ್ಲಿಸಿ ತನ್ನ 33ನೇ ವಯಸ್ಸಿನಲ್ಲಿ ನಿವೃತ್ತರಾದ ಗೋವಿಂದ ಭಟ್ಟ ಅವರ ಸೇವೆಯನ್ನು ಕೊಂಡಾಡಿ ಸ್ಮರಣಿಕೆ, ಫಲಗಳನ್ನು ನೀಡಿ ಗೌರವಿಸಲಾಯಿತು. ಅನಾರೋಗ್ಯ ನಿಮಿತ್ತ ನಿವೃತ್ತರಾದ ಇನ್ನೋರ್ವ ಗುರಿಕಾರರಾದ ಎಂ.ಆರ್ ಗೋಪಾಲಕೃಷ್ಣ ಭಟ್ಟರನ್ನು ಅವರ ನಿವಾಸದಲ್ಲಿ ಗೌರವಿಸಲಾಯಿತು. ಆಭಿನಂದಿತರ ಪರವಾಗಿ ಪೆರ್ನಾಜೆ ಶ್ವೇತಾಂಬಿಕಾ ಮಾತನಾಡಿ ಧನ್ಯವಾದ ಸಮರ್ಪಣೆ ಮಾಡಿದರು.
ಮಹಾಮಂಡಲದ ಮುಷ್ಟಿಭಿಕ್ಷಾ ವಿಭಾಗ ಪ್ರಧಾನರಾದ ಶ್ರೀ ರಮೇಶ ಭಟ್ಟ ಸರವು ಶ್ರೀಮಠದಲ್ಲಿ ನಡೆಯುವ ಕೆಲಸಕಾರ್ಯಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿ ಎಲ್ಲರ ಸಹಕಾರವನ್ನು ಕೋರಿದರು.
ಮಂಡಲ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆಯವರು ಪ್ರಸ್ತುತ ಕಾರ್ಯಗಳು ಮತ್ತು ಮುಂದಿನ ಯೋಜನೆಗಳ ಬಗ್ಗೆ ವಿವರಣೆಗಳನ್ನಿತ್ತರು.
ಸಭೆಯನ್ನು ನಡೆಸಲು ಅನುಕೂಲ ಕಲ್ಪಿಸಿದ ಜನಮಂಗಲ ಸಭಾಭವನದ ಆಡಳಿತ ಸಮಿತಿಯವರಿಗೆ ಮತ್ತು ಈಶ್ವರಮಂಗಲ ವಲಯದ ಎಲ್ಲ ಪದಾಧಿಕಾರಿಗಳಿಗೆ ಶ್ರೀಗುರುಗಳ ಮತ್ತು ಶ್ರೀಕರಾರ್ಚಿತ ದೇವರುಗಳ ಅನುಗ್ರಹ ಸದಾ ಇರಲಿ, ಉತ್ತರೋತ್ತರ ಅಭಿವೃದ್ಧಿಯಾಗಲಿ ಎಂದು ಹಾರೈಸಲಾಯಿತು. ರಾಮ ತಾರಕ ಮಂತ್ರ, ಶಾಂತಿಮಂತ್ರ, ಶಂಖನಾದ, ಧ್ವಜಾವತರಣದೊಂದಿಗೆ ಸಭೆ ಮುಕ್ತಾಯವಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
إرسال تعليق