ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ರಾಷ್ಟ್ರ ಮಟ್ಟದ ಪ್ರವೇಶ ಪರೀಕ್ಷೆ ಯಲ್ಲಿ ಪ್ರಥಮ ಸ್ಥಾನ ಗಳಿಸಿದ ಎಕ್ಸೆಲ್ ಕಾಲೇಜು ವಿದ್ಯಾರ್ಥಿನಿ ದೀಕ್ಷಾ

ರಾಷ್ಟ್ರ ಮಟ್ಟದ ಪ್ರವೇಶ ಪರೀಕ್ಷೆ ಯಲ್ಲಿ ಪ್ರಥಮ ಸ್ಥಾನ ಗಳಿಸಿದ ಎಕ್ಸೆಲ್ ಕಾಲೇಜು ವಿದ್ಯಾರ್ಥಿನಿ ದೀಕ್ಷಾ

 


ಬೆಳ್ತಂಗಡಿ: ಗುರುವಾಯನಕೆರೆ ಎಕ್ಸೆಲ್ ಕಾಲೇಜಿನ ವಿದ್ಯಾರ್ಥಿನಿ ದೀಕ್ಷಾ ಬಿ.ಎನ್ ಅವರು ಎನ್ ಸಿಇಆರ್ ಟಿ ನಡೆಸಿದ ಪ್ರವೇಶ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಈ ಹಿಂದೆ ದ್ವಿತೀಯ ಪಿಯುಸಿ ಪರೀಕ್ಷೆ ಯಲ್ಲಿ 593 ಅಂಕಗಳನ್ನು ಪಡೆದು ರಾಜ್ಯಕ್ಕೆ ಆರನೇ‌ ರಾಂಕ್ ಪಡೆದಿದ್ದರು. ಸಿಇಟಿ ಪರೀಕ್ಷೆ ಯಲ್ಲಿಯೂ ಉತ್ತಮ ಫಲಿತಾಂಶ ಗಳಿಸಿದ್ದಾರೆ.

ಎನ್ ಸಿಇಆರ್ ಟಿ ಗಳಲ್ಲಿ ಆಯ್ಕೆಯಾದವರು ರೀಜನಲ್ ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್ ಗಳಲ್ಲಿ ವಿದ್ಯಾಭ್ಯಾಸ ಕ್ಕೆ ಅವಕಾಶ ವಿರುತ್ತದೆ.
ಹಾಗೂ ಮೈಸೂರಿನ ಆರ್ ಐ ಇನಲ್ಲಿ ಉನ್ನತ ವ್ಯಾಸಂಗ ಕ್ಕೆ ಆಯ್ಕೆಯಾಗಿದ್ದಾರೆ.

ಇವರು ಬಿಎಸ್ಸಿ ಇಡಿ ಗೆ ಪ್ರವೇಶಾತಿ ಪಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆ ಯಲ್ಲಿ ಎಂಎಸ್ಸಿ ಇಡಿ ಗಣಿತ ಹಾಈಗೂ ಎಂಎಸ್ಸಿ ರಸಾಯನ ಶಾಸ್ತ್ರದಲ್ಲಿ ರಾಷ್ಟ್ರ ಮಟ್ಟದಲ್ಲಿ ಪ್ರಥಮ ರಾಂಕ್ ಹಾಗೂ ಬಿಎಸ್ಸಿ ಇಡಿ ಯಲ್ಲೂ ರಾಜ್ಯಕ್ಕೆ ಪ್ರಥಮ ರಾಂಕ್ ಪಡೆದಿದ್ದಾರೆ.

ಇವರ ತಂದೆ ಎಸ್.ಡಿ.ಎಂ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಶ್ರೀಧರ್ ಭಟ್ ಹಾಗೂ ತಾಯಿ ಹಳೆಪೇಟೆ ಶಾಲೆಯ ಶಿಕ್ಷಕಿ ವೀಣಾ ಶಾನುಭೋಗ್

0 تعليقات

إرسال تعليق

Post a Comment (0)

أحدث أقدم