ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬಂಟ್ವಾಳ; ಮಧ್ಯರಾತ್ರಿ ಮನೆಗೆ ನುಗ್ಗಿ ನಾಯಿಯನ್ನು ಹೊತ್ತೋಯ್ದ ಚಿರತೆ

ಬಂಟ್ವಾಳ; ಮಧ್ಯರಾತ್ರಿ ಮನೆಗೆ ನುಗ್ಗಿ ನಾಯಿಯನ್ನು ಹೊತ್ತೋಯ್ದ ಚಿರತೆ

 


ಬಂಟ್ವಾಳ: ಮಧ್ಯರಾತ್ರಿ ಚಿರತೆಯೊಂದು ಮನೆಗೆ ನುಗ್ಗಿ ನಾಯಿಯನ್ನು ಬೇಟೆಯಾಡಿ ಹೊತ್ತುಕೊಂಡು ಹೋಗಿರುವ ಘಟನೆಯೊಂದು ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದಲ್ಲಿ ನಡೆದಿದೆ.

ಕಲ್ಮಲೆ ನಿವಾಸಿ ನಾರಾಯಣ ರೈ ಎಂಬವರ ಮನೆಗೆ ಚಿರತೆ ನುಗ್ಗಿ, ಮನೆಯಲ್ಲಿ ಸಾಕಿದ್ದ ನಾಯಿಯನ್ನು ಬೇಟೆಯಾಡಿದೆ. ಇದೆ ವೇಳೆ ಅಲ್ಲೆ ಇದ್ದ ಮೊತ್ತೊಂದು ನಾಯಿ ರಕ್ಷಣೆಗೆ ನುಗ್ಗಿದ್ದ, ಈ ಚಿರತೆ ನಾಯಿಯನ್ನು ಗಾಯಗೊಳಿಸಿದೆ.

ಈ ವೇಳೆ ನಾಯಿಗಳು ಬೊಗಳುತ್ತಿದ್ದಂತೆ ಮನೆಮಂದಿ ಎದ್ದು ಹೊರ ಬಂದು ಕಿರುಚಾಡಿದ್ದಾರೆ.

ಗಾಬರಿಗೊಂಡ ಚಿರತೆ ನಾಯಿಯನ್ನು ಹೊತ್ತುಕೊಂಡು ಹೋಗಿದೆ. ಗ್ರಾಮದ ಸುತ್ತ ಗುಡ್ಡಗಾಡಿನಲ್ಲಿ ಚಿರತೆ ಆಗಾಗ್ಗೆ ಪ್ರತ್ಯಕ್ಷವಾಗಿ ಗ್ರಾಮಸ್ಥರ ಕಣ್ಣಿಗೆ ಕಾಣಿಸಿಕೊಂಡಿದ್ದು ಭಯ ಹುಟ್ಟಿಸಿದೆ.

ಇದೀಗ ಆಹಾರ ಬೇಟೆಗೆ ರಾತ್ರೋ ರಾತ್ರಿ ಗ್ರಾಮದ ಮನೆಗೆ ನುಗ್ಗಿ ಕಟ್ಟಿ ಹಾಕಿದ್ದ ನಾಯಿಯನ್ನು ಬಲಿ ಪಡೆದಿದೆ.

ಚಿರತೆ ದಾಳಿ ಅನಾಹುತದಿಂದ ಅರಣ್ಯ ಇಲಾಖೆ ಸಿಬ್ಬಂದಿ ಅಲರ್ಟ್ ಆಗಿದ್ದು ಬೊನ್ ಇಟ್ಟು ಚಿರತೆ ಹಿಡಿಯುವ ಕಾರ್ಯಕ್ಕೆ ಮುಂದಾಗಿದ್ದಾರೆ.

0 تعليقات

إرسال تعليق

Post a Comment (0)

أحدث أقدم