ಬದಿಯಡ್ಕ: ಶ್ರೀ ಗಣೇಶ ಮಂದಿರ ಬದಿಯಡ್ಕದಲ್ಲಿ 51 ನೇ ಸಾರ್ವಜನಿಕ ಶ್ರೀ ಗಣೇಶೋತ್ಸವವು ಬಹಳ ವಿಜೃಂಭಣೆಯಿಂದ ನಡೆಯಿತು. ಬೆಳಿಗ್ಗೆ 7.30 ಕ್ಕೆ ಶ್ರೀ ಮಹಾಗಣಪತಿ ಪ್ರತಿಷ್ಠೆ, ಗಣಹೋಮ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಪ್ರಸಾದ ಭೋಜನ ಸಹಿತ ಬಹಳ ವಿಧಿ ವಿಧಾನಗಳಿಂದ ಜರುಗಿತು. ಈ ಧಾರ್ಮಿಕ ಸಮಾರಂಭದಲ್ಲಿ ಮಧ್ಯಾಹ್ನ 1.30 ರಿಂದ ಡಾ. ವಾಣಿಶ್ರೀ ಕಾಸರಗೋಡು ಗಡಿನಾಡ ಕನ್ನಡತಿ ನೇತ್ರತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ.) ಕಾಸರಗೋಡು ಇವರ ವತಿಯಿಂದ ದೇವರ ನಾಮಾವಳಿಗಳಿಂದ ಕೂಡಿದ ಗಾನ ನೃತ್ಯ ವೈಭವವು ಬಹಳ ಭಕ್ತಿ ಪೂರ್ವಕವಾಗಿ ನಡೆಯಿತು.
ಈ ಶ್ರೀ ದೇವರ ಸೇವೆಯಲ್ಲಿ ನಿರೀಕ್ಷ ಶೆಟ್ಟಿ, ಸಾನ್ವಿ ಗುರುಪುರ, ಸಾಕ್ಷಿ ಗುರುಪುರ, ಡಾ. ವಾಣಿಶ್ರೀ ಕಾಸರಗೋಡು, ಗುರುರಾಜ್ ಕಾಸರಗೋಡು, ಪ್ರಖ್ಯಾತ್ ಭಟ್, ಧನ್ವಿ ರೈ ಕೋಟೆ, ಕಿಶನ್ ಅಗ್ಗಿತ್ತಾಯ, ಅಹನಾ ಎಸ್ ರಾವ್ ಹಾಗೂ ಶ್ಯಾಮಲಾ ಸಂಪತ್ತಿಲ ಮುಂತಾದ ಕಲಾವಿದರು ಶ್ರದ್ಧಾ ಭಕ್ತಿಯಿಂದ ಹಾಡಿ ನರ್ತಿಸಿದರು. ಕಾರ್ಯಕ್ರಮದ ಸಮಗ್ರ ನಿರೂಪಣೆಯನ್ನು ಡಾ. ವಾಣಿಶ್ರೀ ಮಾಡಿದರು.
ಈ ವೇದಿಕೆಯಲ್ಲಿ ಭಾಗವಹಿಸಿದ ಎಲ್ಲಾ ಕಲಾವಿದರಿಗೆ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘದ ಪರವಾಗಿ "ಪ್ರಕೃತಿ ಕಲಾರತ್ನ" ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.ಸಂಸ್ಥೆಯ ಕೋಶಾಧಿಕಾರಿ ಡಾ.ವೆಂಕಟ್ ಗಿರೀಶ ಉಪಸ್ಥಿತರಿದ್ದರು. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಗುರುಪ್ರಸಾದ್, ಲಕ್ಷ್ಮಣ ಪ್ರಭು ಕರಿಂಬಿಲ ಹಾಗೂ ಸರ್ವ ಸದಸ್ಯರು ಕಾರ್ಯಕ್ರಮವನ್ನು ನಡೆಸಲು ಅನುವು ಮಾಡಿಕೊಟ್ಟು ಕಲಾವಿದರಿಗೆ ಬಹುಮಾನ ಕೊಟ್ಟು ಹರಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
إرسال تعليق