ಮಸ್ಕತ್ : ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಟೇಕ್ ಆಫ್ ಆಗುವ ಮೊದಲೇ ಇಂಜಿನ್ ಒಂದರಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆಯೊಂದು ಒಮಾನ್ನ ಮಸ್ಕತ್ ನಲ್ಲಿ ನಡೆದಿದೆ.
ಮಸ್ಕತ್ ವಿಮಾನ ನಿಲ್ದಾಣದಲ್ಲಿ ವಿಮಾನವು ಟೇಕ್ ಆಫ್ ಮಾಡುವ ಮೊದಲು ಇಂಜಿನ್ ಒಂದರಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಅದರಲ್ಲಿದ್ದ ಪ್ರಯಾಣಿಕರನ್ನು ಸ್ಥಳಾಂತರಿಸಲಾಯಿತು. ಈ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನವು ಕೊಚ್ಚಿಗೆ ಹೊರಟಿತ್ತು.
ವಿಮಾನದಲ್ಲಿ ನಾಲ್ವರು ಮಕ್ಕಳು ಸೇರಿದಂತೆ ಒಟ್ಟು 145 ಪ್ರಯಾಣಿಕರಿದ್ದರು. ಅವರೆಲ್ಲರನ್ನು ವಿಮಾನದಿಂದ ಟರ್ಮಿನಲ್ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು.
إرسال تعليق