ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಶಿವಮೊಗ್ಗ ದಿಂದ ಬೆಂಗಳೂರಿಗೆ ಮಧ್ಯಾಹ್ನ ವು ರೈಲು ಸೌಕರ್ಯ ಆರಂಭ

ಶಿವಮೊಗ್ಗ ದಿಂದ ಬೆಂಗಳೂರಿಗೆ ಮಧ್ಯಾಹ್ನ ವು ರೈಲು ಸೌಕರ್ಯ ಆರಂಭ

 


ಬೆಂಗಳೂರು:  ಶಿವಮೊಗ್ಗದಿಂದ ಬೆಂಗಳೂರಿಗೆ ಮಧ್ಯಾಹ್ನ ರೈಲಿನ ಸೌಲಭ್ಯ ಇಲ್ಲವೆಂದು ಎಲ್ಲರಿಗೂ ಸಮಸ್ಯೆ ಕಾಡುತ್ತಿತ್ತು. 


ಇದೀಗ ಈ ಸೌಲಭ್ಯವೂ ಶಿವಮೊಗ್ಗ ಜಿಲ್ಲೆಯ ಜನತೆಗೆ ಸಿಗುತ್ತಿದ್ದು, ಸೆಪ್ಟೆಂಬರ್ 12ರಿಂದ ನೂತನ ರೈಲು ಸಂಚಾರ ಆರಂಭವಾಗಿದೆ.


ಶಿವಮೊಗ್ಗ - ಯಶವಂತಪುರ - ಬಾಣಸವಾಡಿ ನಡುವೆ ಈ ರೈಲು ಸಂಚರಿಸಲಿದ್ದು, ಶಿವಮೊಗ್ಗ ನಗರವನ್ನು ಮಧ್ಯಾಹ್ನ 1-05 ಕ್ಕೆ ಬಿಡಲಿದೆ.

ಸಂಜೆ 5-30ಕ್ಕೆ ತುಮಕೂರನ್ನು ತಲುಪಲಿದ್ದು, ಅಲ್ಲಿಂದ 5-40ಕ್ಕೆ ಹೊರಟು ಸಂಜೆ 6-50 ಕ್ಕೆ ಯಶವಂತಪುರ ತಲುಪಿ 7-40 ಕ್ಕೆ ಬಾಣಸವಾಡಿ ತಲುಪಲಿದೆ.


ಅದೇ ರೀತಿ ಬೆಳಗ್ಗೆ 5-50ಕ್ಕೆ ಬಾಣಸವಾಡಿಯಿಂದ ಹೊರಡುವ ಈ ರೈಲು 6-40ಕ್ಕೆ ಯಶವಂತಪುರ, 7-55 ಕ್ಕೆ ತುಮಕೂರು ತಲುಪಲಿದೆ. ತುಮಕೂರಿನಿಂದ 8-05ಕ್ಕೆ ಬಿಡಲಿರುವ ರೈಲು, ಮಧ್ಯಾಹ್ನ 12-30 ಕ್ಕೆ ಶಿವಮೊಗ್ಗ ತಲುಪಲಿದೆ.



0 Comments

Post a Comment

Post a Comment (0)

Previous Post Next Post