ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ತಂದೆಯಾಗುತ್ತಿರುವ ಖುಷಿಯಲ್ಲಿ ನಟ ಧೃವಾ ಸರ್ಜಾ

ತಂದೆಯಾಗುತ್ತಿರುವ ಖುಷಿಯಲ್ಲಿ ನಟ ಧೃವಾ ಸರ್ಜಾ

 


ಬೆಂಗಳೂರು: ಧೃವಾ ಸರ್ಜಾ ಹಾಗೂ ಪ್ರೇರಣಾ ಮನೆಗೆ ಹೊಸ ಅತಿಥಿಯನ್ನು ಬರಮಾಡಿಕೊಳ್ಳುವ ಖುಷಿಯಲ್ಲಿದ್ದಾರೆ. ತಾವು ಪೋಷಕರಾಗುತ್ತಿರುವ ವಿಚಾರವನ್ನು ಪತ್ನಿ ಪ್ರೇರಣಾ ಬೇಬಿ ಬಂಪ್ ಫೋಟೋ ಶೂಟ್ ಮೂಲಕ ಧೃವಾ ಸರ್ಜಾ ತಿಳಿಸಿದ್ದಾರೆ.


ಕನ್ನಡ ಚಿತ್ರರಂಗದ ಸ್ಟಾರ್ ನಟ ಧೃವಾ ಸರ್ಜಾ ತಂದೆಯಾಗುತ್ತಿದ್ದಾರೆ. ಈ ಸಿಹಿ ಸುದ್ದಿಯನ್ನು ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ. 


ನಾವು ಜೀವನದ ಹಂತಕ್ಕೆ ಪ್ರವೇಶಿಸಿದ್ದೇವೆ. ಶೀಘ್ರದಲ್ಲಿ ಬರಲಿರುವ ಮಗುವನ್ನು ಆಶೀರ್ವದಿಸಿ ಎಂದು ಧೃವಾ ಸರ್ಜಾ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. 


ಸದ್ಯ ಈ ಬೇಬಿ ಬಂಪ್ ಫೋಟೋಶೂಟ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ನೆಚ್ಚಿನ ಜೋಡಿ ಫ್ಯಾನ್ಸ್ ಶುಭ ಹಾರೈಸಿದ್ದಾರೆ.


 ವಿವಾಹವಾದ ಮೂರು ವರ್ಷದ ಬಳಿಕ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.


0 Comments

Post a Comment

Post a Comment (0)

Previous Post Next Post