ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಒಂದು ವರ್ಷದ ಮಗುವನ್ನು ಬಾವಿಗೆ ಎಸೆದ ಪಾಪಿ ತಂದೆ

ಒಂದು ವರ್ಷದ ಮಗುವನ್ನು ಬಾವಿಗೆ ಎಸೆದ ಪಾಪಿ ತಂದೆ

 


ಝಾನ್ಸಿ (ಉತ್ತರ ಪ್ರದೇಶ): ಮದ್ಯಪಾನ ಮಾಡಲು ಹಣ ಸಿಗಲಿಲ್ಲ ಎಂಬ ಕೋಪದಲ್ಲಿ ವ್ಯಕ್ತಿ ತನ್ನ ಒಂದು ವರ್ಷದ ಮಗಳನ್ನು ಬಾವಿಗೆ ಎಸೆದು ಕೊಲೆ ಮಾಡಿದ ಘಟನೆಯೊಂದು ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯ ಹತಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.


ಖೇಮಚಂದ್ ಎಂಬಾತನೇ ಈ ಕೃತ್ಯ ಎಸೆದ ಪಾಪಿ ತಂದೆ.


ಆರೋಪಿ ಖೇಮಚಂದ್ ಮದ್ಯ ಕುಡಿಯಲು ಹಣಬೇಕೆಂದು ತನ್ನ ಹೆಂಡತಿಯಲ್ಲಿ ಕೇಳಿದನು. ಆದರೆ, ಆಕೆ ಹಣವನ್ನು ನೀಡಲು ನಿರಾಕರಿಸಿದ್ದರಿಂದ ಇಬ್ಬರ ನಡುವೆ ಜಗಳವಾಗಿತ್ತು.


 ಇದೇ ಸಿಟ್ಟಿನಲ್ಲಿ ಖೇಮಚಂದ್ ತನ್ನ ಒಂದು ವರ್ಷದ ಅಮಾಯಕ ಮಗುವನ್ನು ಬಾವಿಗೆ ಎಸೆದು ಸ್ಥಳದಿಂದ ಪರಾರಿಯಾಗಿದ್ದಾನೆ. ಈ ವಿಷಯ ಗೊತ್ತಾದ ಸುತ್ತಮುತ್ತಲಿನ ಜನರು ಧಾವಿಸಿ ಬಂದು ಮಗುವನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ.


ಇತ್ತ, ಪೊಲೀಸರು ಸ್ಥಳಕ್ಕಾಗಮಿಸಿ ಮಗುವಿನ ಶವವನ್ನು ಬಾವಿಯಿಂದ ಹೊರತೆಗೆದಿದ್ದಾರೆ.


 ಆಸ್ಪತ್ರೆಗೆ ಶವ ಸಾಗಿಸಿ ಮರಣೋತ್ತರ ಪರೀಕ್ಷೆಗೆ ನಡೆಸಲಾಗಿದೆ. ಸದ್ಯ ಕುಟುಂಬಸ್ಥರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ತಂದೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.


0 تعليقات

إرسال تعليق

Post a Comment (0)

أحدث أقدم