ಮಂಗಳೂರು: "ಶತಮಾನೋತ್ಸವದ ಕಾರ್ಯಕ್ರಮದೊಳಗೊಂದು ರಜತ ಸಂಭ್ರಮಾಚರಣೆ ಮಾಡುತ್ತಿರುವ ವಾಗೀಶ್ವರೀ ಕಲಾವರ್ಧಕ ಸಂಘದ ಪೂರ್ವ ಸೂರಿಗಳು ಸ್ಮರಣೀಯರು.ಕುಡುಮಲ್ಲಿಗೆಯವರ ಅಪೂರ್ವ ಸಾಹಿತ್ಯ ಸಂಗ್ರಹ ಅಭಿನಂದನೀಯ. ಬಾಲ್ಯದಲ್ಲಿ ಮಹಾಮಾಯಾ ದೇವಸ್ಥಾನದ ಅಂಗಣದಲ್ಲಿ ಆಟವಾಡುತ್ತಿದ್ದಾಗ ಹಿರಿಯ ಯಕ್ಷಗಾನ ಕಲಾವಿದರು ತಾಳಮದ್ದಳೆ ನಡೆಸುತ್ತಿದ್ದ ದಿನಗಳನ್ನು ನೆನಪಿನಿಂದ ಪುಳಕ ಗೊಂಡಿದ್ದೇನೆ" ಎಂದು ಆಚಾರ್ಯ ಮಠದ ಪಂಡಿತ್ ನರಸಿಂಹ ಆಚಾರ್ಯರು ಅಧ್ಯಕ್ಷೀಯ ಭಾಷಣದಲ್ಲಿ ನುಡಿದರು.
ಕರ್ನಾಟಕ ಯಕ್ಷಗಾನ ಅಕಾಡಮಿಯ ಸಹಯೋಗದಲ್ಲಿ 25 ವಾರಗಳಿಂದ ನಡೆಯುತ್ತಿರುವ ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘದ ಸಂಮಾನ- ಸಂಸ್ಮರಣೆ- ತಾಳಮದ್ದಳೆ ಕೂಟ ಕಾರ್ಯಕ್ರಮದ ಸಂಯೋಜಕರನ್ನು, ಕಲಾವಿದರನ್ನು ನಾಗೇಶ್ ಪ್ರಭು ಮತ್ತು ಮಕ್ಕಳು ಭಗವದ್ಗೀತೆಯ ಪ್ರತಿಗಳನ್ನು ನೀಡಿ ಗೌರವಿಸಿದರು.
ಮಹಾಮಾಯಾ ದೇವಸ್ಥಾನದ ಟ್ರಸ್ಟಿ ಕೆ.ಪ್ರಕಾಶ್ ಕಾಮತ್ ಹಾಗೂ ಸುರಭಿ ಸಂಸ್ಥೆಯ ಸುಭಾಶ್ಚಂದ್ರ ಪ್ರಭು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಸಾಂತೂರು ಸಂಸ್ಮರಣೆ:
ಪ್ರಧಾನ ಕಾರ್ಯದರ್ಶಿ ಪಿ. ಸಂಜಯ ಕುಮಾರ್ ರಾವ್ ಅವರು ಹಿರಿಯ ಅರ್ಥಧಾರಿ, ಶಿಕ್ಷಕರಾಗಿದ್ದ ಕೀರ್ತಿಶೇಷ ಸಾಂತೂರು ಸದಾಶಿವ ರಾವ್ ಅವರು ಯಕ್ಷಗಾನ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿ ಮಾತುಗಾರಿಕೆಯ ಸೊಗಡನ್ನು ನೆನಪಿಸಿದರು.
ಕುಡುಮಲ್ಲಿಗೆಯವರಿಗೆ ವಾಗೀಶ್ವರೀ ಸಂಮಾನ:
ಯಕ್ಷಗಾನ ಅರ್ಥಧಾರಿ, ಕವಿ, ಸಾಹಿತಿ, ಪತ್ರಕರ್ತ, ವಿಮರ್ಶಕ ಹಾಗೂ ಪುರಸಣ ಮಾಹಿತಿಗಳನ್ನೊಳಗೊಂಡ ಇಪ್ಪತ್ತೈದು ಕೃತಿ ರಚಿಸಿದ ಕುಡುಮಲ್ಲಿಗೆ ಕೃಷ್ಣ ಶೆಟ್ಟಿ ಅವರಿಗೆ ವಾಗೀಶ್ವರೀ ಸಂಮಾನ- 25 ನೀಡಿ ಗೌರವಿಸಲಾಯಿತು.
ಪ್ರಧಾನ ಸಂಚಾಲಕ ಕದ್ರಿ ನವನೀತ ಶೆಟ್ಟಿಯವರು ಅಭಿನಂದಿಸಿದರು.ಅಶೋಕ ಬೋಳೂರು ಸಂಮಾನಪತ್ರ ವಾಚಿಸಿದರು. ಶೋಭಾ ಐತಾಳ್ ನಿರೂಪಿಸಿದರು.
ಸಂಘದ ಅಧ್ಯಕ್ಷ ಶ್ರೀನಾಥ್ ಪ್ರಭು, ಉಪಾಧ್ಯಕ್ಷೆ ಪ್ರಪುಲ್ಲಾ ನಾಯಕ್, ಕೋಶಾಧಿಕಾರಿ ಶಿವಪ್ರಸಾದ್ ಪ್ರಭು ಉಪಸ್ಥಿತರಿದ್ದರು.
ಮಾಯಾ ರಾಮ ತಾಳಮದ್ದಳೆ:
ಶ್ರೀ ರಾಮ ಚರಿತಾಮೃತ ಸರಣಿಯ ಅಂಗದ ಸಂಧಾನ ಪ್ರಸಂಗದ ಉತ್ತರಾರ್ಧ ಹಾಗೂ ನಾಗಾಸ್ತ್ರ ಕುಂಭಕರ್ಣ ಕಾಳಗ ಪ್ರಸಂಗದ ಪೂರ್ವಾರ್ಧದಲ್ಲಿರುವ "ಮಾಯಾ ರಾಮ" ತಾಳಮದ್ದಳೆ ಸಂಘದ ಕಲಾವಿದರಿಂದ ಜರಗಿತು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
إرسال تعليق