ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಖಲ ಭಾರತೀಯ ಸಾಹಿತ್ಯ ಪರಿಷತ್ತಿನ ಬಂಟ್ವಾಳ ತಾಲೂಕಿನ ಸಮಿತಿ - ಅಮೃತೋತ್ಸವ ಕವಿಗೋಷ್ಠಿ

ಅಖಲ ಭಾರತೀಯ ಸಾಹಿತ್ಯ ಪರಿಷತ್ತಿನ ಬಂಟ್ವಾಳ ತಾಲೂಕಿನ ಸಮಿತಿ - ಅಮೃತೋತ್ಸವ ಕವಿಗೋಷ್ಠಿ



ಮಂಗಳೂರು: ಆಗಸ್ಟ್‌ 13ರಂದು ಕನ್ಯಾನದ ಸರಸ್ವತೀ ವಿದ್ಯಾಲಯದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಬಂಟ್ವಾಳ ಸಮಿತಿಯವತಿಯಿಂದ ಸ್ವಾತಂತ್ರ್ಯ ಹೊರಾಟಗಾರ ಅಮ್ಮೆಂಬಳ ಬಾಳಪ್ಪ ನಮನ, ಶಾಲಾ ಮಕ್ಕಳಿಂದ ದೇಶಭಕ್ತಿ ಪ್ರಚೋದಕ ಕಾರ್ಯಕ್ರಮ, ಹಿರಿ ಕಿರಿಯ ಕವಿಗಳಿಂದ ಅಮೃತೋತ್ಸವ ಕವಿಗೋಷ್ಠಿ- ಮತ್ತು ವಾಣಿಶ್ರೀ ಬಳಗದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.


ರಾಜ್ಯ ಸಮಿತಿ ಕಾರ್ಯಕರ್ತ ಶ್ರೀ ಶೈಲೇಶ್ ರವರ ಉದ್ಘಾಟನೆಯೊಡನೆ ನಡುಹಗಲು ಗಂಟೆ ೧-೩೦ ರಿಂದ ಪ್ರಾರಂಭವಾಗಿ ಇಳಿಹಗಲು 5 ಗಂಟೆಯ ತನಕವೂ ಈ ಸಮಾರಂಭ ನಡೆಯಲಿದೆ.


ರಾಜ್ಯ ಕಾರ್ಯದರ್ಶಿ ಡಾ|| ಮಾಧವ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಶುಭಾವಸರದಲ್ಲಿ ದ.ಕ‌ ಸಂಸ್ಕಾರ ಭಾರತಿಯ ಜಿಲ್ಲಾಧ್ಯಕ್ಷ ತಾರಾನಾಥ ಕೊಟ್ಟಾರಿಯವರು ಮುಖ್ಯ ಅತಿಥಿಗಳಾಗಿರುವರು.


ಉಪಾಹಾರ ನಂತರ, ಮುಂದುವರಿದು ಹಿರಿ ಕಿರಿಯ ಕವಿಗಳಿಂದ ಅಮೃತೋತ್ಸವ ಕವಿಗೋಷ್ಠಿಯು ಕಾರ್ಯದರ್ಶಿ ಮಾನಸಾ ವಿಜಯ್ ಕೈಂತಜೆ ಸಾರಥ್ಯದಲ್ಲಿ ಅಡ್ಯನಡ್ಕ ಆರೋಗ್ಯ ಕೇಂದ್ರದ ವೈದ್ಯ ಕವಿ ಡಾ ವಿಶ್ವೇಶ್ವರ ವಿ.ಕೆ ಅವರ ಅಧ್ಯಕ್ಷತೆ ಯಲ್ಲಿ ಸಂಪನ್ನಗೊಳ್ಳಲಿದೆ.


ಅನಂತರ ಸಾಂಸ್ಕೃತಿಕ ಕಾರ್ಯದರ್ಶಿ ಡಾ ವಾಣಿಶ್ರೀ ನೇತೃತ್ವದ ಗಡಿನಾಡ ಸಾಂಸ್ಕೃತಿಕ ಸಂಘ ಕಾಸರಗೋಡು ಇದರ ವತಿಯಿಂದ ಹಲ ಬಗೆಯ ದೇಶ ಪ್ರೇಮ ಪ್ರಚೋದಕ ಗಾನ ನಾಟ್ಯ ಮಂಜರಿ ಹಾಗೂ ಕನ್ಯಾನ ಸರಸ್ವತೀ ವಿದ್ದಾಲಯದ ಚಿಣ್ಣರ ಮನೋರಂಜನಾ ಕಾರ್ಯಕ್ರಮ ಗಳೂ ನಡೆಯಲಿವೆ.


ಸಂಚಾಲಕ ಜಯಾನಂದ ಪೆರಾಜೆಯವರು ಸ್ವಾಗತ ಹಾಗೂ ಪ್ರಸ್ತಾವನೆ ಗೈಯಲ್ಲಿದ್ದು ನಿಯೋಜಿತ ಅಧ್ಯಕ್ಷ ಡಾ ಸುರೇಶ ನೆಗಳಗುಳಿ ಯೋಜನೆಯ ಪಕ್ಷಿನೋಟ ಬೀರಲಿದ್ದಾರೆ. ಪ್ರಾಯೋಜಕ ಹಾಗೂ ಸದಸ್ಯ ಈಶ್ವರ ಪ್ರಸಾದ್ ಕನ್ಯಾನ ಧನ್ಯವಾದ ನೀಡಲಿದ್ದಾರೆ.


ಇನ್ನೋರ್ವಸದಸ್ಯ ಕುಮಾರ ಸ್ವಾಮಿ ಕನ್ಯಾನ ಛಾಯಾಗ್ರಹಣ ಪ್ರಾಯೋಜನೆ ನೀಡಲಿದ್ದಾರೆ.

ಉಪಾಧ್ಯಕ್ಷೆ ಪಲ್ಲವಿ ಕಾರಂತ್, ಸಹ ಕಾರ್ಯದರ್ಶಿ ಅಶೋಕ್ ಕಲ್ಯಟೆ, ಕೋಶಾಧಿಕಾರಿ ಪ್ರಶಾಂತ್ ಕಡ್ಯ, ಸಲಹಾ ಸದಸ್ಯ ರೇಮಂಡ್ ಡಿಕೂನಾ ತಾಕೊಡೆ, ಅಶೋಕ ಕಡೇ ಶಿವಾಲಯ, ಬಾಯಾರ್ ರಮೇಶ್ ಎಂ, ಜಯರಾಮ ಪಡ್ರೆ ಸೀತಾಲಕ್ಷ್ಮೀ ವರ್ಮ, ಬಾಲಕೃಸಹಿತ ಇತರ ಸದಸ್ಯರ ಉಪಸ್ಥಿತಿಯಲ್ಲಿ 22-23 ರ ಪರಿಷತ್ತಿನ ನೂತನ ಸಮಿತಿಯು ಚಾಲನೆಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

0 تعليقات

إرسال تعليق

Post a Comment (0)

أحدث أقدم