ಬಂಟ್ವಾಳ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಸೇರಿದಂತೆ ಇನ್ನು ಮುಂದೆ ರೈತರು ತಾವು ಹೊಂದಿರುವ ಸಾಗುವಳಿ ಮಿತಿಯ ಜಮೀನು ಕನಿಷ್ಠ 15 ಸೆಂಟ್ಸ್ ಇದ್ದರೆ ಸಾಕು ಅವರಿಗೆಲ್ಲ ಶೂನ್ಯ ಬಡ್ಡಿ ದರದಲ್ಲಿ ಬೆಳೆ ಸಾಲ ವಿತರಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಅವಕಾಶ ಮಾಡಿಕೊಟ್ಟಿದೆ. ಈ ಸಂಬಂಧ ರೈತರು ತಮ್ಮ ಹೆಸರಿನಲ್ಲಿ ಕೇವಲ 15 ಸೆಂಟ್ಸ್ ಅಥವಾ ಮಿಗಿಲಾಗಿ ಸಾಗುವಳಿ ಜಮೀನು ಇದ್ದಲ್ಲಿ ತಮ್ಮ ಎಲ್ಲಾ ದಾಖಲೆಗಳೊಂದಿಗೆ ತಮ್ಮ ಗ್ರಾಮ ವ್ಯಾಪ್ತಿಯ ಹತ್ತಿರದ ಪ್ರಾಥಮಿಕ ಸಹಕಾರಿ ಸಂಘಗಳಲ್ಲಿ ಅರ್ಜಿ ನೀಡಿ ಶೂನ್ಯ ಬಡ್ಡಿ ಬೆಳೆ ಸಾಲ ಯೋಜನೆಯ ಪ್ರಯೋಜನ ಪಡೆಯಬೇಕೆಂದು ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಈ ಮೂಲಕ ರೈತಾಪಿವರ್ಗದವರನ್ನು ವಿನಂತಿಸಿದ್ದಾರೆ.
ಈ ಹಿಂದೆ ಕನಿಷ್ಠ ಸಾಗುವಳಿ ಮಿತಿಯು 25 ಸೆಂಟ್ಸ್ ಇರುತ್ತಿದ್ದೂ 25 ಸೆಂಟ್ಸ್ ಕಡಿಮೆ ಸಾಗುವಳಿ ಜಮೀನು ಇರುವ ಅನೇಕ ಬಡ ರೈತರು ಶೂನ್ಯ ಬಡ್ಡಿ ಬೆಳೆ ಸಾಲ ಯೋಜನೆಯಿಂದ ವಂಚಿತರಾಗುತ್ತಿದ್ದರು.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಅನೇಕ ಮಂದಿ ಅತೀ ಸಣ್ಣ ಬಡ ರೈತರಿಗೆ ಸರಕಾರದ ಅಕ್ರಮ -ಸಕ್ರಮ ಯೋಜನೆ, ಕುಟುಂಬ ವಿಭಾಗ ಪತ್ರ ಸೇರಿದಂತೆ ಇನ್ನಿತರ ಮೂಲಗಳಿಂದ 15 ಸೆಂಟ್ಸ್ ಅಥವಾ ಮೇಲ್ಪಟ್ಟು ಜಮೀನು ಹೊಂದಿರುವ ತುಂಡು ತುಂಡು ಹಿಡುವಳಿದಾರರಿಗೆ ಸಹ ಪಿ. ಎಮ್.ಕಿಸಾನ್ ಸಮ್ಮಾನ್ ಯೋಜನೆ ರೀತಿಯಲ್ಲಿಯೇ ಶೂನ್ಯ ಬಡ್ಡಿಯಲ್ಲಿ ಬೆಳೆ ಸಾಲ ವಿತರಣೆ ಮಾಡಬೇಕು ಎಂದು ದಕ್ಷಿಣ ಕನ್ನಡ ಲೋಕ ಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್ ರವರು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವರಾದ ಶೋಭಾ ಕರಂದ್ಲಾಜೆ ಯವರಲ್ಲಿ ವಿಷಯ ತಿಳಿಸಿದ ಮೇರೆಗೆ ಸಚಿವರು ತಕ್ಷಣವೇ ಸ್ಪಂದಿಸುವ ಮೂಲಕ ಕೇಂದ್ರ ಸರಕಾರ ಮಟ್ಟದಲ್ಲಿ ಕನಿಷ್ಠ 15 ಸೆಂಟ್ಸ್ ನಿಂದ 25 ಸೆಂಟ್ಸ್ ಕನಿಷ್ಠ ಸಾಗುವಳಿ ಹೊಂದಿರುವ ಬಡ ರೈತರಿಗೂ ಅವರ ಕೃಷಿ ಕೆಲಸ ಕಾರ್ಯಗಳಿಗೆ ಅನುಕೂಲ ವಾಗುವಂತೆ ಶೂನ್ಯ ಬಡ್ಡಿ ದರದಲ್ಲಿ ಬೆಳೆ ಸಾಲ ವಿತರಣೆ ಮಾಡಲು ಎಲ್ಲಾ ಸಹಕಾರಿ ಸಂಘ ಗಳಿಗೆ ಆದೇಶ ಹೊರಡಿಸಲಾಗಿದೆ.
ಈ ರೀತಿಯಲ್ಲಿ ಕನಿಷ್ಠ ಸಾಗುವಳಿ ಜಮೀನು ಮಿತಿಯನ್ನು 15 ಸೆಂಟ್ಸ್ ನಿಂದ 25 ಸೆಂಟ್ಸ್ ಹೊಂದಿರುವ ರೈತರಿಗೂ ಶೂನ್ಯ ಬಡ್ಡಿ ಯಲ್ಲಿ ಬೆಳೆ ಸಾಲ ವಿತರಿಸಲು ಪ್ರಯತ್ನಸಿದ ಮಂಗಳೂರು ಸಂಸದರಾದ ನಳಿನ್ ಕುಮಾರ್ ಕಟೀಲ್ ಈ ಬಗ್ಗೆ ಆದೇಶ ಹೊರಡಿಸಿದ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವರಾದ ಶೋಭಾ ಕರಂದ್ಲಾಜೆ ಯವರಿಗೆ ರೈತರ ಪರವಾಗಿ ಕೃತಜ್ಯತೆಗಳನ್ನು ಪ್ರಭಾಕರ ಪ್ರಭು ಸಲ್ಲಿಸಸಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
Post a Comment