ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮೋದಿಜೀ ಕಾರ್ಯವೈಖರಿಗೆ ಜಗತ್ತಿನಾದ್ಯಂತ ಮೆಚ್ಚುಗೆ ಬಿಜೆಪಿ ಕಾರ್ಯಕರ್ತರಿಗೆ ಹೆಮ್ಮೆ: ಸುಲೋಚನಾ ಭಟ್

ಮೋದಿಜೀ ಕಾರ್ಯವೈಖರಿಗೆ ಜಗತ್ತಿನಾದ್ಯಂತ ಮೆಚ್ಚುಗೆ ಬಿಜೆಪಿ ಕಾರ್ಯಕರ್ತರಿಗೆ ಹೆಮ್ಮೆ: ಸುಲೋಚನಾ ಭಟ್

 



ಬಂಟ್ವಾಳ: ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೆಳೆದ ಎಂಟು ವರ್ಷಗಳಲ್ಲಿ ದೇಶದಲ್ಲಿ ಕೈಗೊಂಡ ಯೋಜನೆ, ಯೋಚನೆ ಗಳಿಂದ ಭಾರತವು ಆರ್ಥಿಕವಾಗಿ ಸದೃಢವಾಗಿದ್ದು ಸಾಮಾಜಿಕ, ಶೈಕ್ಷಣಿಕ,ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ರಾಷ್ಟ್ರವು ನಾಗಲೋಟದಲ್ಲಿ ಸಾಗುತ್ತಿದ್ದು ಅಂತಾರಾಷ್ಟ್ರೀಯ ವಿಚಾರದಲ್ಲಿ ಪ್ರಪಂಚದ ಮೂಂಚೂಣಿ ರಾಷ್ಟ್ರಗಳನ್ನು ಹತ್ತಿಕ್ಕುವುದರೊಂದಿಗೆ, ಉತ್ತಮ ಬಾಂಧವ್ಯದೊಂದಿಗೆ ಜಗತ್ತಿನಲ್ಲಿಯೇ ಮೆಚ್ಚುಗೆ ಪಡೆದುಕೊಂಡಿರುವುದು ಹಾಗೂ ಇದರ ಪೂರಕವಾಗಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿ ಯವರು ಸಹ ಅನೇಕ ಯೋಜನೆಗಳ ಮೂಲಕ ವಿವಿಧ ಸ್ಥರದಲ್ಲಿ ಅಭಿವೃದ್ಧಿ ಮಾಡುತ್ತಿದ್ದು ಬಂಟ್ವಾಳ ಕ್ಷೇತ್ರ ಮಾದರಿ ಕ್ಷೇತ್ರವಾಗಿ ಹೊರಹೊಮ್ಮತ್ತಿರುವುದು ಬಿಜೆಪಿ ಕಾರ್ಯಕರ್ತರಿಗೆ ಹೆಮ್ಮೆಯ ವಿಚಾರ ವಾಗಿದೆ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ನಿರ್ದೇಶಕಿ ಸುಲೋಚನಾ ಜಿ. ಕೆ. ಭಟ್ ಅಭಿಪ್ರಾಯಪಟ್ಟರು.


ಅವರು ಕರ್ಪೆ ಗ್ರಾಮ ಬೂತ್ ಸಂಖ್ಯೆ 1 ರ ವತಿಯಿಂದ ಆಯೋಜಿಸಲಾದ ಪ್ರಧಾನ ಮಂತ್ರಿಯವರ ಮನ್ ಕೀ ಬಾತ್ ಕಾರ್ಯಕ್ರಮವನ್ನು ಕರ್ಪೆ ಗ್ರಾಮದ ಕೃಷ್ಣ ಪ್ರಭುರವರ ಮನೆಯಲ್ಲಿ ವೀಕ್ಷಿಸಿ ಬಿಜೆಪಿ ಕಾರ್ಯಕರ್ತರೊಂದಿಗೆ ವಿಚಾರ ವಿನಿಮಯ ಮಾಡಿಕೊಂಡರು.


ಈ ಕಾರ್ಯಕ್ರಮದಲ್ಲಿ, ಕಾವಳ ಪಡೂರು ಮಹಾ ಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಪ್ರಭು, ಗ್ರಾಮ ಪಂಚಯತ್ ಸದಸ್ಯರಾದ ವಿದ್ಯಾ ಪ್ರಭು ಬೂತ್ ಅಧ್ಯಕ್ಷ  ತೇಜಸ್ ಪೂಜಾರಿ, ಪ್ರಮುಖರಾದ ಶೋಭಾ ನಾಯಕ್ ಸೇರಿದಂತೆ ಮತ್ತಿತರರ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

0 Comments

Post a Comment

Post a Comment (0)

Previous Post Next Post