ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪಾಣಾಜೆ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ ಉಪೇಂದ್ರ ಬಲ್ಯಾಯ ದೇವಸ್ಯ ಆಯ್ಕೆ

ಪಾಣಾಜೆ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ ಉಪೇಂದ್ರ ಬಲ್ಯಾಯ ದೇವಸ್ಯ ಆಯ್ಕೆ


ಪಾಣಾಜೆ: ಪಾಣಾಜೆ ವಿದ್ಯಾವರ್ಧಕ ಸಂಘದ ಮಹಾಸಭೆಯು ಸಂಘದ ಅಧ್ಯಕ್ಷ ಪಿಲಿಂಗಲ್ಲು ಕೃಷ್ಣ ಭಟ್ಟರ ಅಧ್ಯಕ್ಷತೆಯಲ್ಲಿ ಸುಬೋಧ ಪ್ರೌಢಶಾಲೆಯಲ್ಲಿ ಜರುಗಿತು. ಕಾರ್ಯದರ್ಶಿ ಗಿಳಿಯಾಲು ಮಹಾಬಲೇಶ್ವರ ಭಟ್ಟರು ಗತ ವರ್ಷದ ವರದಿಯನ್ನು ಮಂಡಿಸಿದರು. ಖಜಾಂಜಿ ಸದಾಶಿವ ಎಸ್ ವಿ ಅವರು ಲೆಕ್ಕಪತ್ರ ಮಂಡಿಸಿದರು.


ಮುಂದಿನ ಮೂರು ವರ್ಷಗಳಿಗೆ ಆಡಳಿತ ಮಂಡಳಿಯನ್ನು ಸರ್ವಾನುಮತದಿಂದ ಆರಿಸಲಾಯಿತು.

ಅಧ್ಯಕ್ಷರಾಗಿ ಉಪೇಂದ್ರ ಬಲ್ಯಾಯ ದೇವಸ್ಯ, ಉಪಾಧ್ಯಕ್ಷರಾಗಿ ಕಡಂದೇಲು ಈಶ್ವರ ಭಟ್, ಕಾರ್ಯದರ್ಶಿ ಮತ್ತು ಶಾಲಾ ಸಂಚಾಲಕರಾಗಿ ಗಿಳಿಯಾಲು ಮಹಾಬಲೇಶ್ವರ ಭಟ್ ಹಾಗೂ ಖಜಾಂಜಿಯಾಗಿ ಪಿ ಎಂ ಬಾಲಕೃಷ್ಣ ಭಟ್ ನೆಲ್ಲಿತ್ತಿಮಾರು ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.


ಸದಸ್ಯರಾಗಿ ಸದಾಶಿವ ಎಸ್ ವಿ ಪಾಲ್ತಮೂಲೆ, ಪಿಲಿಂಗಲ್ಲು ಕೃಷ್ಣ ಭಟ್, ವಿನೋಬಾ ಶೆಟ್ಟಿ ದಂಬೆಕಾನ, ಅವಿನಾಶ್ ಜಿ ಕೆ ಗಿಳಿಯಾಲು, ಕೃಷ್ಣ ಮೋಹನ ಪಿ ಎಸ್ ಪುತ್ತೂರು, ಕೃಪಾಶಂಕರ ಅರ್ಧಮೂಲೆ, ಶ್ರೀಮತಿ ವಿದ್ಯಾ ನಾರಾಯಣ ಮಣ್ಣಂಗಳ, ಪುರಂದರ ಎಂ ಜಿ ಆರ್ಲಪದವು, ಡಾ.ಹರಿಕೃಷ್ಣ ಪಾಣಾಜೆ, ಡಾ.ಕೆ ತಿಮ್ಮಪ್ಪ ರೈ ಕೆದಂಬಾಡಿ ಅವರನ್ನು ಆಯ್ಕೆ ಮಾಡಲಾಯಿತು. ಮುಖ್ಯಶಿಕ್ಷಕ ಶ್ರೀಪತಿ ಇಂದಾಜೆ ಅವರನ್ನು ಪದನಿಮಿತ್ತ ಸದಸ್ಯರನ್ನಾಗಿ ಹಾಗೂ ನಿರ್ಮಲಾ ಕೆ ಅವರನ್ನು ಶಿಕ್ಷಕ ಪ್ರತಿನಿಧಿಯನ್ನಾಗಿ ನೇಮಿಸಲಾಯಿತು.


ನಿಕಟಪೂರ್ವ ಅಧ್ಯಕ್ಷ ಪಿಲಿಂಗಲ್ಲು ಕೃಷ್ಣ ಭಟ್ಟರು ನೂತನ ಅಧ್ಯಕ್ಷರಿಗೆ ಶುಭ ಹಾರೈಕೆಗಳೊಂದಿಗೆ ಅಧಿಕಾರ ಹಸ್ತಾಂತರಿಸಿದರು. ನೂತನ ಅಧ್ಯಕ್ಷರು ಅಧಿಕಾರ ಸ್ವೀಕರಿಸಿ ಸರ್ವ ಸದಸ್ಯರ ಸಹಕಾರವನ್ನು ಕೋರಿದರು.

ಪ್ರೌಢಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಉಪೇಂದ್ರ ಬಲ್ಯಾಯರು ಸ್ವಾಗತಿಸಿ ಮುಖ್ಯ ಶಿಕ್ಷಕ ಶ್ರೀಪತಿ ಇಂದಾಜೆ  ಧನ್ಯವಾದ ಸಮರ್ಪಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

0 Comments

Post a Comment

Post a Comment (0)

Previous Post Next Post