ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಡ್ರೈವಿಂಗ್ ತಿಳಿಯದ ಗೆಳತಿಗೆ ಕಾರು ಓಡಿಸಲು ಕೊಟ್ಟು ಮಾಡಿದಳು ದೊಡ್ಡ ಎಡವಟ್ಟು

ಡ್ರೈವಿಂಗ್ ತಿಳಿಯದ ಗೆಳತಿಗೆ ಕಾರು ಓಡಿಸಲು ಕೊಟ್ಟು ಮಾಡಿದಳು ದೊಡ್ಡ ಎಡವಟ್ಟು

 


ಛತ್ತೀಸ್ಗಢ : ಬಿಲಾಸ್ ಪುರದ ಮುಂಗೇಲಿ ಬಡಾವಣೆ ನಿವಾಸಿ ರವೀಂದ್ರ ಕುರ್ರೆ ಎಂಬಾತ ತನ್ನ ಗೆಳತಿಯೊಂದಿಗೆ ಪ್ರಯಾಣಿಸುತ್ತಿದ್ದನು.

ಈ ವೇಳೆ ಸುಮ್ಮನಿರದ ಆತ ಆಕೆಗೆ ಚಾಲನೆ ಬಾರದಿದ್ದರೂ ಸಹ ಕಾರು ಓಡಿಸಲು ಹೇಳಿದ್ದಾನೆ. ಪಕ್ಕದಲ್ಲಿ ನಾನಿರುತ್ತೇನೆ ಎಂದು ಧೈರ್ಯ ತುಂಬಿದ್ದಾನೆ.


ಗೆಳೆಯನ ಮಾತು ಕೇಳಿ ಚಾಲಕನ ಸ್ಥಾನದಲ್ಲಿ ಕುಳಿತ ಆಕೆ ಏಕಾಏಕಿ ಎಕ್ಸಲೇಟರ್ ಒತ್ತಿದ್ದು, ಇದರಿಂದ ಎದುರಿಗೆ ಬರುತ್ತಿದ್ದ ಬೈಕ್ ಸವಾರರಿಗೆ ಕಾರು ರಭಸದಿಂದ ಡಿಕ್ಕಿ ಹೊಡೆದಿದೆ.

ಬೈಕಿನಲ್ಲಿ ಮೂವರು ಪ್ರಯಾಣಿಸುತ್ತಿದ್ದು ಡಿಕ್ಕಿಯ ತೀವ್ರತೆಗೆ ಮೀಟರ್ ಗಳಷ್ಟು ದೂರಕ್ಕೆ ಹೋಗಿ ಬಿದ್ದಿದ್ದಾರೆ.


ಇದರ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು ತೀವ್ರವಾಗಿ ಗಾಯಗೊಂಡಿರುವ ಮತ್ತೊಬ್ಬನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ನಂತರ ಸ್ಥಳೀಯರು ರವೀಂದ್ರ ಮತ್ತು ಆತನ ಗೆಳತಿಯನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ.


0 تعليقات

إرسال تعليق

Post a Comment (0)

أحدث أقدم