ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಿದ್ದರಾಮಯ್ಯ ಜನ್ಮ ದಿನಕ್ಕೆ ಸಾರಿಗೆ ಇಲಾಖೆ ಹಲವು ಬಸ್ ಬುಕ್; ವಾಹನ ಸಿಗದೆ ಪರದಾಡಿದ ಪ್ರಯಾಣಿಕರು

ಸಿದ್ದರಾಮಯ್ಯ ಜನ್ಮ ದಿನಕ್ಕೆ ಸಾರಿಗೆ ಇಲಾಖೆ ಹಲವು ಬಸ್ ಬುಕ್; ವಾಹನ ಸಿಗದೆ ಪರದಾಡಿದ ಪ್ರಯಾಣಿಕರು

 


ಬೆಂಗಳೂರು : ದಾವಣಗೆರೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ 75 ನೇ ಜನ್ಮ ದಿನಾಚರಣೆಯ ಸಿದ್ದರಾಮಯ್ಯ ಅಮೃತಮಹೋತ್ಸವ ಕಾರ್ಯಕ್ರಮಕ್ಕೆ 500 ಕ್ಕೂ ಹೆಚ್ಚು ವಾಯುವ್ಯ ರಸ್ತೆ ಸಾರಿಗೆ ಬಸ್‌ಗಳು ಸೇರಿದಂತೆ ಒಟ್ಟು 7,000 ಬಸ್​ಗಳು ಬುಕ್ ಆಗಿದ್ದು, ಬಸ್ ಗಳು, ಬಾಡಿಗೆ ವಾಹನಗಳು ಸಿಗದೇ ವಾಹನ ಸವಾರರು ಪರದಾಡುವಂತಾಗಿದೆ.

ದಾವಣಗೆರೆಯಲ್ಲಿ ಇಂದು ಸಿದ್ದರಾಮಯ್ಯ ಅಮೃತಮಹೋತ್ಸವದ ಹಿನ್ನೆಲೆ ರಾಜ್ಯದ ಸಾರಿಗೆ ಇಲಾಖೆಯ ಹಲವು ಬಸ್ ಗಳನ್ನು ಬುಕ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸಮಯಕ್ಕೆ ಸರಿಯಾಗಿ ಬಸ್ ಸಿಗದೇ ವಾಹನ ಸವಾರರು ಪರದಾಡುವಂತಾಗಿದೆ.


ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ಹಲವು ಕರಾರು ಒಪ್ಪಂದದ ಮೇಲೆ ವಾಹನಗಳನ್ನು ಒದಗಿಸಲಾಗಿದ್ದು, ವಿವಿಧಡೆ ಬಸ್ ಸಂಚಾರದಲ್ಲಿ ಆ.03 ಮತ್ತು ಆ.04ರಂದು ಬಸ್ ಕಾರ್ಯಾಚರಣೆಯಲ್ಲಿ ವ್ಯತ್ಯಯವಾಗಲಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹೇಳಿದೆ. ಇದರಿಂದಾಗಿ ವಾಹನಗಳು ಸಿಗದೇ ಪ್ರಯಾಣಿಕರು ಪರದಾಡುವಂತಾಗಿದೆ.


0 Comments

Post a Comment

Post a Comment (0)

Previous Post Next Post