ಪುತ್ತೂರು: ಪತಿಯ ಉತ್ತರಕ್ರಿಯೆಯ ದಿನದಂದೇ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಾಣಾಜೆ ಗ್ರಾಮದ ಕೊಂದಲಕಾಣಾ ಎಂಬಲ್ಲಿ ಇಂದು ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ಇತ್ತೀಚೆಗೆ ನಿಧನರಾದ ಕೊಂದಲಕಾಣ ನಿವಾಸಿ ಕೃಷ್ಣ ನಾಯ್ಕ ಅವರ ಪತ್ನಿ ವಸಂತಿ ಎಂದು ಗುರುತಿಸಲಾಗಿದೆ.
ಇಂದು ಕೃಷ್ಣ ನಾಯ್ಕರ ಉತ್ತರ ಕ್ರಿಯಾದ ಅಂಗವಾಗಿ ಉಪ್ಪಿನಂಗಡಿಯಲ್ಲಿ ಪಿಂಡ ಬಿಡುವ ಸಂದರ್ಭ ಮನೆಯಲ್ಲಿದ್ದ ಪತ್ನಿ ವಸಂತಿರವರು ಮನೆಯ ಕೊಟ್ಟಿಗೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.
Post a Comment