ಶಿವಮೊಗ್ಗ: ಶಿವಮೊಗ್ಗದ ಭದ್ರಾವತಿ ತಾಲೂಕಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಮನೆಯ ಗೋಡೆ ಕುಸಿದು ಮಹಿಳೆ ಮೃತಪಟ್ಟು, ಮತ್ತೊಬ್ಬರು ಗಾಯಗೊಂಡ ಘಟನೆಯೊಂದು ನಡೆದಿದೆ.
ಮೃತರನ್ನು ಕಾಚಿಗೊಂಡನಹಳ್ಳಿ ಗ್ರಾಮದ ಸುಜಾತ(55) ಎಂದು ಗುರುತಿಸಲಾಗಿದೆ.
ರಾಜ್ಯಾದ್ಯಂತ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಸೋಮವಾರ ರಾತ್ರಿ ಸುರಿದ ಮಳೆಗೆ ಕಾಚಿಗೊಂಡನಹಳ್ಳಿ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿ, ಗಾಯಾಳು ಕೃಷ್ಣಮೂರ್ತಿ ಅವರನ್ನು ಶಿವಮೊಗ್ಗದ ಹಾಸ್ಪಿಟಲ್ ಗೆ ಸ್ಥಳಾಂತರಿಸಲಾಗಿದೆ.
إرسال تعليق