ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬೆಂಗಳೂರಿನಿಂದ ತೆರಳುವ ಖಾಸಗಿ ಬಸ್ ದರ ಹೆಚ್ಚಳ

ಬೆಂಗಳೂರಿನಿಂದ ತೆರಳುವ ಖಾಸಗಿ ಬಸ್ ದರ ಹೆಚ್ಚಳ

 


ಬೆಂಗಳೂರು : ಗೌರಿ ಗಣೇಶ ಹಬ್ಬಕ್ಕೆ ಊರಿಗೆ ಹೋಗುವವರಿಗೆ ಬಿಗ್ ಶಾಕ್, ಬೆಂಗಳೂರಿನಿಂದ ಹೋಗುವ ಖಾಸಗಿ ಬಸ್ ಗಳ ಟಿಕೆಟ್ ದರ ಹೆಚ್ಚಳವಾಗಿದೆ.


ಹಬ್ಬಕ್ಕಾಗಿ ಬೆಂಗಳೂರಿನಿಂದ ತಮ್ಮ ಊರುಗಳಿಗೆ ಹೊರಟವರಿಗೆ ಖಾಸಗಿ ಬಸ್ ಗಳ ಟಿಕೆಟ್ ದರ ಮೂರು ಪಟ್ಟು ಹೆಚ್ಚಾಗಿದೆ. ಬೆಂಗಳೂರಿನಿಂದ ರಾಜ್ಯದ ವಿವಿಧ ಪ್ರಮುಖ ಸ್ಥಳಗಳಿಗೆ ವಿಶೇಷ ಬಸ್ ಸೌಲಭ್ಯ ಒದಗಿಸುತ್ತಿದ್ದ ಕೆಎಸ್‌ಆರ್ಟಿಸಿ ಈ ಬಾರಿ ವಿಶೇಷ ಬಸ್ ಗಳ ಸಂಖ್ಯೆಯನ್ನು ಕಡಿಮೆ ಮಾಡಿದೆ.


ಈ ಹಿನ್ನೆಲೆ ಆಗಸ್ಟ್ 26 ರಿಂದಲೇ ಖಾಸಗಿ ಬಸ್‌ಗಳ ಟಿಕೆಟ್ ದರ ಹೆಚ್ಚಾಗಿದೆ. ಖಾಸಗಿ ಬಸ್ಗಳಲ್ಲಿ ಟಿಕೆಟ್ ದರವನ್ನು ಎರಡರಿಂದ ಮೂರು ಪಟ್ಟು ಹೆಚ್ಚಿಸಲಾಗಿದೆ. 


ಹುಬ್ಬಳ್ಳಿ ಮಾರ್ಗದ ಬಸ್ಗಳಿಗೆ ಹೆಚ್ಚಿನ ಬೇಡಿಕೆ ಕಂಡುಬಂದಿದೆ. ಬುಧವಾರ ಮತ್ತು ಗುರುವಾರಗಳಂದು ಜಿಲ್ಲಾ ಕೇಂದ್ರಗಳಿಂದ ಬೆಂಗಳೂರಿಗೆ ಬರುವ ಬಸ್‌ಗಳ ದರವನ್ನು ಹೆಚ್ಚಿಸಲಾಗಿದೆ.


ಬೆಂಗಳೂರು-ಹುಬ್ಬಳ್ಳಿ 1,300 ರೂ.- 2,000 ರೂ. ಬೆಂಗಳೂರು-ಶಿವಮೊಗ್ಗ 900 ರೂ.ರಿಂದ 1,400 ರೂ. ಬೆಂಗಳೂರು-ಮಂಗಳೂರು 1,100ರಿಂದ 1,600 ರೂ. ಬೆಂಗಳೂರು-ಬೆಳಗಾವಿ 1,500ರಿಂದ 2,000 ರೂ.ಗೆ ಏರಿಸಲಾಗಿದೆ.


0 تعليقات

إرسال تعليق

Post a Comment (0)

أحدث أقدم