ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪಡ್ರೆ ಜಟಾಧಾರಿ ಮೂಲಸ್ಥಾನದಲ್ಲಿ ವಿಶೇಷ ಸಭೆ; ಸಮಿತಿ ರಚನೆ

ಪಡ್ರೆ ಜಟಾಧಾರಿ ಮೂಲಸ್ಥಾನದಲ್ಲಿ ವಿಶೇಷ ಸಭೆ; ಸಮಿತಿ ರಚನೆ



ಪೆರ್ಲ: ಪಡ್ರೆ ಗ್ರಾಮದ ಸ್ವರ್ಗ ಮಲೆತಡ್ಕ ಶ್ರೀ ಜಟಾಧಾರೀ ಮೂಲಸ್ಥಾನದಲ್ಲಿ ಭಾನುವಾರ ಬೆಳಗ್ಗೆ ವಿಶೇಷ ತುರ್ತು ಸಭೆ ನಡೆಯಿತು. ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ, ಅರ್ಚಕ ಬೆಲ್ಲ ಮಾಧವ ಭಟ್ ಅಧ್ಯಕ್ಷತೆ ವಹಿಸಿದ್ದರು.


ಶ್ರೀ ಕ್ಷೇತ್ರದ ಸಕ್ರಿಯ ಕಾರ್ಯಕರ್ತರಾದ ಶ್ರೀಹರಿ ಭಟ್ ಸಜಂಗದ್ದೆ ಮತ್ತು ಕೆ.ವೈ. ಸುಬ್ರಹ್ಮಣ್ಯ ಭಟ್,  ದೈವಜ್ಞರ ನಿರ್ದೇಶಾನುಸಾರ ಕ್ಷೇತ್ರತಂತ್ರಿ ಕೊರೆಕ್ಕಾನ ನಾರಾಯಣ ಭಟ್ ಅವರ ನೇತೃತ್ವದಲ್ಲಿ ಮೂಲಸ್ಥಾನದಲ್ಲಿ ಮುಂದಿನ ದಿನಗಳಲ್ಲಿ ನಡೆಸಲೇ ಬೇಕಾದ ವೈದಿಕ ಪೂಜಾ ಹವನಾದಿಗಳ ಬಗ್ಗೆ ಮಾಹಿತಿ ನೀಡಿದರು.


ರಾಶಿ ಚಿಂತನೆಯಲ್ಲಿ ಜಟಾಧಾರಿ ಮೂಲಸ್ಥಾನವು ಶ್ರೀದುರ್ಗೆಯ ಆರಾಧನಾ ಕ್ಷೇತ್ರವೂ ಆಗಿದ್ದು ದೇವಿಯನ್ನು ಕಡೆಗಣಿಸಿರುವುದು, ದುರ್ಗಾದೇವಿಯ ಅವಗಣನೆಯೇ ಪಡ್ರೆ ಗ್ರಾಮದಲ್ಲಿ ಜಟಾಧಾರಿ ದೈವದ ತಂಬಿಲ ಸೇವೆ, ಮಹಿಮೆ ಉತ್ಸವಾದಿಗಳು ಸಂಪೂರ್ಣವಾಗಿ ನಿಲ್ಲಲು ಪ್ರಧಾನ ಕಾರಣ ಎಂದು ತಿಳಿದು ಬಂದಿದ್ದು, ಕುಂಭಮಾಸದ ಮೊದಲು ಶುಭ ದಿನದಂದು ಸ್ಥಳ ಪ್ರಶ್ನೆ ಚಿಂತನೆ ನಡೆಸಬೇಕಾಗಿರುವ ಅನಿವಾರ್ಯತೆಯನ್ನು ತಿಳಿಸಿದರು.


ದೈವಸ್ಥಾನಕ್ಕೆ ಸಂಬಂಧಿಸಿ ಮುಂದಿನ ಎಲ್ಲಾ ದೈವಿಕ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಆಡಳಿತ ಮೊಕ್ತೇಸರ ಬೆಲ್ಲ ಮಾಧವ ಭಟ್ ಅವರ ಅಪೇಕ್ಷೆಯಂತೆ ಆಡಳಿತ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಪತ್ತಡ್ಕ ರಾಧಾಕೃಷ್ಣ ಭಟ್, ಕಾರ್ಯದರ್ಶಿ ವಿಷ್ಣುಪ್ರಸಾದ್ ಕುಕ್ಕುನಡಿ, ಖಜಾಂಚಿ ಪುರುಷೋತ್ತಮ ದುಗ್ಗಜ್ಜಮೂಲೆ ಮತ್ತು ಶಿವಪ್ರಕಾಶ್ ಪಾಲೆಪ್ಪಾಡಿ ಆಯ್ಕೆಯಾದರು‌.25 ಸದಸ್ಯರ ಕಾರ್ಯಕಾರಿ ಸಮಿತಿ ರಚಿಸಾಲಾಯಿತು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 تعليقات

إرسال تعليق

Post a Comment (0)

أحدث أقدم