ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಚೀನಾ ಸ್ಮಾರ್ಟ್ ಫೋನ್ ಗಳ ನಿಷೇಧ ಇಲ್ಲ- ರಾಜೀವ್ ಚಂದ್ರಶೇಖರ್

ಚೀನಾ ಸ್ಮಾರ್ಟ್ ಫೋನ್ ಗಳ ನಿಷೇಧ ಇಲ್ಲ- ರಾಜೀವ್ ಚಂದ್ರಶೇಖರ್

 


ನವದೆಹಲಿ: 'ಚೀನಾ ಕಂಪನಿಗಳ ₹ 12 ಸಾವಿರಕ್ಕಿಂತ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ದೇಶದಲ್ಲಿ ನಿಷೇಧಿಸುವ ಯಾವುದೇ ಆಲೋಚನೆಯೂ ಇಲ್ಲ' ಎಂದು ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಸೋಮವಾರ ಸ್ಪಷ್ಟಪಡಿಸಿದ್ದಾರೆ.


ಭಾರತದಿಂದ ರಫ್ತು ಹೆಚ್ಚಿಸುವಂತೆ ಸರ್ಕಾರವು ಚೀನಾದ ಮೊಬೈಲ್‌ ತಯಾರಕ ಕಂಪನಿಗಳನ್ನು ಕೇಳಿದೆ ಎಂದು ಅವರು ಹೇಳಿದ್ದಾರೆ.


ದೇಶದ ಎಲೆಕ್ಟ್ರಾನಿಕ್‌ ವ್ಯವಸ್ಥೆಯಲ್ಲಿ ದೇಶಿ ಕಂಪನಿಗಳ ಪಾತ್ರವೂ ಇದೆ. ಆದರೆ, ವಿದೇಶಿ ಬ್ರ್ಯಾಂಡ್‌ಗಳನ್ನು ಹೊರಗಿಡುವುದು ಎನ್ನುವುದು ಅದರ ಅರ್ಥ ಅಲ್ಲ ಎಂದು ತಿಳಿಸಿದ್ದಾರೆ.

0 تعليقات

إرسال تعليق

Post a Comment (0)

أحدث أقدم