ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವಿಜೃಂಭಣೆಯ ರಾಘವೇಂದ್ರ ಆರಾಧನಾ ಮಹೋತ್ಸವ: ಸಹಸ್ರಾರು ಜನರಿಗೆ ಅನ್ನ ಸಂತರ್ಪಣೆ

ವಿಜೃಂಭಣೆಯ ರಾಘವೇಂದ್ರ ಆರಾಧನಾ ಮಹೋತ್ಸವ: ಸಹಸ್ರಾರು ಜನರಿಗೆ ಅನ್ನ ಸಂತರ್ಪಣೆ


ಮಂಡ್ಯ: ಕಲಿಯುಗದ ಕಾಮಧೇನು ಶ್ರೀ ಗುರು ಸಾರ್ವಭೌಮ ಶ್ರೀ ರಾಘವೇಂದ್ರ ಸ್ವಾಮಿಗಳ 351ನೇ ಆರಾಧನೆ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ನಗರದ ವ್ಯಾಸರಾಜ ಮಠದಲ್ಲಿ ನಡೆಯಿತು. ಬೆಳಗ್ಗೆ ಪೂಜಾ ಮಹೋತ್ಸವ ಅಭಿಷೇಕ ಅಷ್ಟೋತ್ತರ, ಪಾರಾಯಣಗಳು ವಿಧಿವತ್ತಾಗಿ ನಡೆದು ನಡೆದಿದ್ದ ನೆರೆದಿದ್ದ ಅಪಾರ ಸಂಖ್ಯೆಯ ಭಕ್ತಾದಿಗಳನ್ನು ರೋಮಾಂಚನಗೊಳಿಸಿತು.


ಶ್ರೀ ರಾಘವೇಂದ್ರರ ಮಧ್ಯಾರಾಧನೆ ಅಂಗವಾಗಿ ಬೆಳಗ್ಗೆ 7 ಗಂಟೆಗೆ ಪಾದಪೂಜೆ ಸೇವಾ ಸಂಕಲ್ಪ ಅಷ್ಟೋತ್ತರ ಸಹಿತ ಪಂಚಾಮೃತ ಅಭಿಷೇಕ, ಪಲ್ಲಕ್ಕಿ ಉತ್ಸವ ಮತ್ತು ಮಹಾ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.


ಬೆಳಿಗ್ಗೆ 10:00 ಕನಕ ಅಭಿಷೇಕ 12ಕ್ಕೆ ಪ್ರಕಾರೋತ್ಸವ ಸೇವೆ ನಡೆದು ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸಹಸ್ರಾರು ಸಂಖ್ಯೆಯ ಭಕ್ತಾದಿಗಳು ಭಾಗವಹಿಸಿದ್ದು ಶ್ರೀ ರಾಯರ ಕೃಪೆಗೆ ಪಾತ್ರರಾದರು ಮಾಜಿ ಸಚಿವ ಎಂ ಎಸ್ ಆತ್ಮಾನಂದ ನಗರಸಭಾ ಸದಸ್ಯ ಎಂಪಿ ಅರುಣ್ ಕುಮಾರ್,ಹಿರಿಯ ಪತ್ರಕರ್ತ ಶ್ರೀಪಾದು ಶ್ರೀ ರಾಘವೇಂದ್ರ ಸಮಿತಿಯ ಅಧ್ಯಕ್ಷ ಸದಾಶಿವ್ ಭಟ್ ನೇತೃತ್ವದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು  ಪ್ರಸಾದ ವಿನಿಯೋಗ ಕಾರ್ಯಕ್ರಮದಲ್ಲಿ ಸಚಿವ ಆತ್ಮಾನಂದ, ದಾಮೋದರ್ ಮತ್ತು ಶ್ರೀ ಕೃಷ್ಣ ಭಜನಾ ಮಂಡಳಿಯ ಸದಸ್ಯರು ಅತ್ಯಂತ ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮಕ್ಕೆ ಕಳೆ ತಂದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

0 Comments

Post a Comment

Post a Comment (0)

Previous Post Next Post