ಮಂಗಳೂರು: ಮಂಗಳೂರು ಉತ್ತರ ಕ್ಷೇತ್ರದ ಪಡುಪೆರಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡುಪೆರಾರ ಗ್ರಾಮದ ಮುಂಡೇವು ಪ.ಜಾತಿ ಕಾಲನಿಗೆ ಹೋಗುವ ರಸ್ತೆಗೆ ಕಾಂಕ್ರಿಟೀಕರಣ, ಹೈಮಾಸ್ಕ್ ದೀಪ ಅಳವಡಿಕೆ, ಟ್ರಾನ್ಸ್ ಫಾರ್ಮರ್ ಅಳವಡಿಕೆ, ಕೊಳವೆ ಬಾವಿ ರಚನೆ ಮತ್ತು ಪಂಪು ಅಳವಡಿಕೆ ಇದರ ಉದ್ಘಾಟನೆ ಸಹಿತ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಶಾಸಕರಾದ ಡಾ.ಭರತ್ ಶೆಟ್ಟಿಯವರು ಭಾನುವಾರ ಲೋಕಾರ್ಪಣೆ ಗೊಳಿಸಿದರು.
ಪಡುಪೆರಾರ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಅಮಿತಾ ಶೆಟ್ಟಿ, ಉಪಾಧ್ಯಕ್ಷರಾದ ಸೇಸಮ್ಮ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉಗ್ಗಪ್ಪ ಮೂಲ್ಯ, ಸದಸ್ಯರುಗಳಾದ ಯಶವಂತ ಪೂಜಾರಿ, ದೇವಪ್ಪ ಶೆಟ್ಟಿ, ಸುಜಾತಾ, ವಿನೋದ್, ಗಣೇಶ್, ವನಿತಾ, ಗಣೇಶ್ ಬಿ ಎಸ್, ಮೀನಾಕ್ಷಿ, ಅರುಣ್ ಕೋಟಿಯಾನ್, ಮೆಸ್ಕಾಂ ಅಧಿಕಾರಿಗಳು, ಗಣ್ಯರು ಕಾರ್ಯಕರ್ತರು ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
إرسال تعليق