ಮಂಗಳೂರು: 14 ಲಕ್ಷ ರೂಪಾಯಿ ಅನುದಾನದಿಂದ ನಿರ್ಮಿಸಲಾಗಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮರಕಡ ಇದರ ನೂತನ ವೇದಿಕೆ ಹಾಗೂ ತಡೆಗೋಡೆಯ ಉದ್ಘಾಟನೆಯನ್ನು ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರು ಭಾನುವಾರ ನೆರವೇರಿಸಿದರು.
ಮರಕಡದ ಸಾರ್ವಜನಿಕ ಬಂಧುಗಳು ಹಾಗೂ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಪ್ರಮುಖರು ಶಾಸಕರಾದ ಡಾ.ಭರತ್ ಶೆಟ್ಟಿಯವರಿಗೆ ನೂತನ ವೇದಿಕೆಯ ಅಗತ್ಯದ ಬಗ್ಗೆ ಮನವಿ ಮಾಡಿಕೊಂಡಿದ್ದು, ಶಾಸಕರಾದ ಡಾ.ಭರತ್ ಶೆಟ್ಟಿಯವರು ಮುತುವರ್ಜಿ ವಹಿಸಿ ತಮ್ಮ ಶಾಸಕ ನಿಧಿಯಿಂದ ಹಾಗೂ ಸ್ಥಳೀಯ ಪಾಲಿಕೆ ಸದಸ್ಯರಾದ ಲೋಹಿತ್ ಅಮೀನ್ ಅವರ ಪಾಲಿಕೆ ಸದಸ್ಯರ ಅನುದಾನ ಸೇರಿಸಿ ಭವ್ಯ ವೇದಿಕೆ ಹಾಗೂ ಗಣೇಶನ ಮೂರ್ತಿಯನ್ನು ಪೂಜಿಸುವ ಕಟ್ಟೆ ನಿರ್ಮಿಸಿಕೊಟ್ಟಿದ್ದು, ಈ ಬಾರಿಯ ಗಣೇಶೋತ್ಸವ ಭವ್ಯ ನೂತನ ವೇದಿಕೆಯಲ್ಲಿ ನಡೆಯಲಿದ್ದು, ಕೊಟ್ಟ ಭರವಸೆಯನ್ನು ಈಡೇರಿಸಿದ್ದಕ್ಕಾಗಿ ಶಾಸಕರನ್ನು ಸಮಿತಿಯ ವತಿಯಿಂದ ಪ್ರಮುಖರು ಸನ್ಮಾನಿಸಿದರು.
ಈ ಸಂದರ್ಭ ಸ್ಥಳೀಯ ಮನಪಾ ಸದಸ್ಯರಾದ ಲೋಹಿತ್ ಅಮೀನ್, ಹಾಗೂ ಗೌರವ ಸಲಹೆಗಾರರಾದ ಕಿಶೋರ್ ರೈ, ಜೀವನ್, ಉಮಾನಾಥ ಕೋಟ್ಯಾನ್, ಹರೀಶ್ ಶೆಟ್ಟಿ, ವಾಮನ್ ಸಾಲ್ಯಾನ್, ಶ್ರೀನಿವಾಸ್, ಪ್ರಭಾಕರ್ ಭಂಡಾರಿ, ಸುರೇಶ್ ಹಳೆಮೋಗರು, ಸಮಿತಿಯ ಅಧ್ಯಕ್ಷರಾದ ಚಂದ್ರಹಾಸ್, ಕಾರ್ಯದರ್ಶಿ ಮಹೇಶ್, ಹಾಗೂ ಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
Post a Comment