ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಲಾರಿ ಮತ್ತು ಬೈಕ್ ಅಪಘಾತ; ಬೈಕ್ ಸವಾರ ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರಗಿ ಅವರ ಪುತ್ರ ಸಾವು

ಲಾರಿ ಮತ್ತು ಬೈಕ್ ಅಪಘಾತ; ಬೈಕ್ ಸವಾರ ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರಗಿ ಅವರ ಪುತ್ರ ಸಾವು

 


ಹುಬ್ಬಳ್ಳಿ: ರಸ್ತೆಬದಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ ಪುತ್ರ ಸಾವನ್ನಪ್ಪಿದ ಘಟನೆಯೊಂದು ಹುಬ್ಬಳ್ಳಿಯ ತಾರಿಹಾಳ ಬೈಪಾಸ್ ಮೈಕ್ರೋಫಿನಿಶ್ ಫ್ಯಾಕ್ಟರಿ ಬಳಿ ತಡರಾತ್ರಿ ನಡೆದಿದೆ.


ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ ಅವರ ಪುತ್ರ ತಿಲಕ ಕಲಬುರ್ಗಿ (22) ಮೃತ ದುರ್ದೈವಿ.


 ನುಗ್ಗಿಕೇರಿ ಹನುಮಾನ್ ದೇವಸ್ಥಾನಕ್ಕೆ ಹೋಗಿ ವಾಪಸ್ ಬರುವ ವೇಳೆ ಈ ಅವಘಡ ಸಂಭವಿಸಿದೆ.


 ತಿಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಆತನ ಸ್ನೇಹಿತನಿಗೆ ಗಂಭೀರ ಗಾಯಗಳಾಗಿವೆ. 


ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

0 تعليقات

إرسال تعليق

Post a Comment (0)

أحدث أقدم