ಮಂಗಳೂರು : ಈಗಾಗಲೇ ಜಾರಿಯಲ್ಲಿರುವ ನೈಟ್ ಕರ್ಫ್ಯೂ ಜೊತೆ ಜಿಲ್ಲಾಡಳಿತ ಇದೀಗ ಮದ್ಯ ಮಾರಾಟ ನಿಷೇಧವನ್ನು ಮತ್ತೆ ಅಗಸ್ಟ್ 5 ರವರೆಗೆ ಮುಂದುವರೆಸಿದೆ.
ಬೆಳ್ಳಾರೆ ಪ್ರವೀಣ್ ಹಾಗೂ ಸುರತ್ಕಲ್ ನಲ್ಲಿ ನಡೆದ ಫಾಝಿಲ್ ಹತ್ಯೆ ಬಳಿಕ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಈ ಹಿಂದೆ ಅಗಸ್ಟ್ 3 ರವರೆಗೆ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಿ ಆದೇಶ ಹೊರಡಿಸಿತ್ತು.
ಇದೀಗ ಪರಿಸ್ಥಿತಿ ಇನ್ನೂ ತಿಳಿಯಾಗದ ಕಾರಣ ಮತ್ತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ಕೊರಿಕೆ ಮೆರೆಗೆ ದಕ್ಷಿಣಕನ್ನಡ ಜಿಲ್ಲಾಧಿಕಾರಿ ರಾಜೇಂದ್ರ ಕೆವಿ ಅವರು ಇಡಿ ಜಿಲ್ಲೆಯಾದ್ಯಂತ ಮದ್ಯಮಾರಾಟ ನಿಷೇಧವನ್ನು ಅಗಸ್ಟ್ 5 ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ.
إرسال تعليق